ಬ್ರೆಡ್ ಎಗ್ ಬೋಟ್
ಬ್ರೆಡ್ ಎಗ್ ಬೋಟ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಬ್ರೆಡ್ - 4
- ಮೊಟ್ಟೆ - 3
- ಕ್ರೀಮ್ - ಸ್ವಲ್ಪ
- ಕಾಳು ಮೆಣಸಿನ ಪುಡಿ - ಅರ್ಧ ಚಮಚ
- ಈರುಳ್ಳಿ - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಖಾರದ ಪುಡಿ - ಅರ್ಧ ಚಮಚ
- ದೊಡ್ಡ ಮೆಣಿಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು ಆರ್ಧ ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಬೆಣ್ಣೆ - ಸ್ವಲ್ಪ
ಮಾಡುವ ವಿಧಾನ...
- ಉದ್ದವಾದ ಬ್ರೆಡ್ ವೊಂದನ್ನು ತೆಗೆದುಕೊಂಡು ಮಧ್ಯ ಭಾಗದಲ್ಲಿ ಬೋಟಿನಂತೆ ಹಳ್ಳ ಮಾಡಬೇಕು. ಮಧ್ಯೆಯಿರುವ ಬ್ರೆಡ್ ನ್ನು ತೆಗೆದು ಹಾಕಬೇಕು.
- ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ದೊಡ್ಡ ಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದಿಟ್ಟುಕೊಳ್ಳಬೇಕು.
- ಪಾತ್ರೆಯೊದನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆ, ಕ್ರೀಮ್, ಖಾರದ ಪುಡಿ, ಕಾಳು ಮೆಣಿಸಿನ ಪುಡಿ, ಉಪ್ಪು ಹುರಿದಿಟ್ಟುಕೊಂಡ ಈರುಳ್ಳಿ, ದೊಡ್ಡ ಮೆಣಿಸಿನ ಕಾಯಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
- ಬೋಟಿನ ಆಕಾರ ಮಾಡಿಕೊಂಡ ಬ್ರೆಡ್ ಗೆ ಬೆಣ್ಣೆಯನ್ನು ಹಾಕಿ ನಂತರ ಈ ಮಿಶ್ರಣವನ್ನು ಹಾಕಬೇಕು. ನಂತರ ಓವನ್ ನಲ್ಲಿಟ್ಟು 15-20 ನಿಮಿಷಗಳ ಬೇಯಿಸಿದರೆ ರುಚಿಕರವಾದ ಬ್ರೆಡ್ ಎಗ್ ಬೋಟ್ ಸವಿಯಲು ಸಿದ್ಧವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.