ನೀರನ್ನು ಚೆನ್ನಾಗಿ ಕುದಿಸಿಕೊಂಡು ಅದಕ್ಕೆ ಕತ್ತರಿಸಿಕೊಂಡ ಬೇಬಿ ಕಾರ್ನ್ ಹಾಕಿ 5 ನಿಮಿಷ ಬಿಡಬೇಕು. ನಂತರ ಬೇಬಿ ಕಾರ್ನ್ ಗಳನ್ನು ತೆಗೆದು ಪಾತ್ರೆಯೊಂದಕ್ಕೆ ಹಾಕಿಕೊಳ್ಳಬೇಕು.
ಪಾತ್ರೆಯೊಂದನ್ನು ತೆಗೆದುಕೊಂಡು, ಉಪ್ಪು, ಖಾರದ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಮೈದಾಹಿಟ್ಟು, ಜೋಳದ ಹಿಟ್ಟು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾಯಲು ಬಿಡಬೇಕು.
ಎಣ್ಣೆ ಕಾದ ನಂತರ ಗಟ್ಟಿಯಾಗಿ ಕಲಸಿಕೊಂಡ ಹಿಟ್ಟಿಗೆ ಬೇಬಿ ಕಾರ್ನ್ ಗಳನ್ನು ಅದ್ದಿ ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕರಿದುಕೊಳ್ಳಬೇಕು.
ನಂತರ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಶುಂಠಿ, ಬೆಳ್ಳುಳ್ಳು ಪೇಸ್ಟ್ ಹಾಕಿ ಹುರಿದುಕೊಳ್ಳಬೇಕು. ನಂತರ ಈರುಳ್ಳಿ, ದೊಡ್ಡ ಮೆಣಸಿನ ಕಾಯಿ, ಈರುಳ್ಳಿ ಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
ಚಿಲ್ಲಿ ಸಾಸ್, ಸೋಯಾ ಸಾಸ್, ಉಪ್ಪು, ಅಚ್ಚ ಖಾರದ ಪುಡಿ ಹಾಗೂ ದೊಡ್ಡ ಉರಿಯಲ್ಲಿ ಮಸಾಲೆ ಗಟ್ಟಿಯಾಗುವವರೆಗೂ ಬಿಡಬೇಕು. ನಂತರ ಈಗಾಗಲೇ ಎಣ್ಣೆಯಲ್ಲಿ ಕರಿದಿಟ್ಟುಕೊಂಡ ಬೇಬಿ ಕಾರ್ನ್ ಗಳನ್ನು ಇದಕ್ಕೆ ಹಾಕಬೇಕು. ನಂತರ ಬಟ್ಟಲೊಂದಕ್ಕೆ ಸ್ವಲ್ಪ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ ನೀರನ್ನು ಹಾಕಿಡಬೇಕು. ಇದನ್ನು ಮಸಾಲೆಯೊಂದಿಗೆ ಬೆಂದ ಬೇಬಿ ಕಾರ್ನ್ ಗೆ ಹಾಕಿ ಮತ್ತೆ 5 ನಿಮಿಷಗಳ ಬೇಯಲು ಬಿಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾಗ ಬೇಬ್ ಕಾರ್ನ್ ಮಂಚೂರಿ ಸವಿಯಲು ಸಿದ್ಧ.