ಸೆಟ್ ದೋಸೆ ಮಾಡುವ ವಿಧಾನ
ಬಿಸಿ ಬಿಸಿ ಸೆಟ್ ದೋಸೆ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು
- ಇಡ್ಲಿ ಅಕ್ಕಿ: ಒಂದು ಕಪ್
- ದೋಸೆ ಅಕ್ಕಿ: ಒಂದು ಕಪ್
- ಉದ್ದಿನ ಬೇಳೆ : ಅರ್ಧ ಕಪ್
- ಗಟ್ಟಿ ಅವಲಕ್ಕಿ: ಅರ್ಧ ಕಪ್
- ಮೆಂತ್ಯಕಾಳು: ಒಂದು ಚಮಚ
- ಬೆಲ್ಲ- ಸ್ವಲ್ಪ
- ಉಪ್ಪು: ರುಚಿಗೆ ತಕ್ಕಷ್ಟು
- ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
- ಒಂದು ಪಾತ್ರೆಯಲ್ಲಿ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ತೊಳೆದು ಸುಮಾರು 6 ಗಂಟೆ ನೆನೆಸಿ
- ಮತ್ತೊಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ನೆನೆಸಿ
- ಇದಾದ ನಂತರ ಮಿಕ್ಸಿ ಅಥವಾ ಗ್ರೈಂಡರ್ ಗೆ ಹಾಕಿ ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ
- ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಚಮಚ ಪುಡಿ ಮಾಡಿದ ಬೆಲ್ಲವನ್ನು ಮಿಕ್ಸ್ ಮಾಡಿ
- (ರಾತ್ರಿ ರುಬ್ಬಿ ಬೆಳಗ್ಗೆ ದೋಸೆ ಹಾಕಿದರೇ ಉತ್ತಮ)
- ನಂತರ ದೋಸೆ ಹಿಟ್ಟನ್ನು ಮಿಕ್ಸ್ ಮಾಡಿ 2 ಗಂಟೆ ಬಿಡಿ
- ಸ್ಟವ್ ಮೇಲೆ ಕಾವಲಿ ಇಚ್ಚು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ
- ಸೌಟಿನಲ್ಲಿ ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕಿ
- ನಂತರ ಅದರ ಮೇಲೆ ತುರಿದ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ,
- ಎರಡು ಕಡೆ ಎಣ್ಣೆ ಹಾಕಿ ಬೇಯಿಸಿ, ಸೆಟ್ ದೋಸೆಯನ್ನು ತುಂಬಾ ರೋಸ್ಟ್ ಮಾಡಬಾರದು
- ಈಗ ಮೃದುವಾದ ಸೆಟ್ ದೋಸೆ ಚಟ್ನಿ ಅಥವಾ ತರಕಾರಿ ಸಾಗು ಜೊತೆ ಸವಿಯಲು ಸಿದ್ಧ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.