ಟೊಮೊಟೊ ಸಾಸ್
ಟೊಮೊಟೊ ಸಾಸ್ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು
- ಹಣ್ಣು ಟೊಮಾಟೊ-1 ಕೆಜಿ
- ಬೆಳ್ಳುಳ್ಳಿ- 1 ಗೆಡ್ಡೆ
- ಶುಂಠಿ- 1 ಇಂಚು
- ಒಣ ಮೆಣಸಿನಕಾಯಿ ಪುಡಿ- 2 ಚಮಚ
- ವಿನೇಗರ್- 2 ಚಮಚ
- ಸಕ್ಕರೆ ಅರ್ಧ ಕಪ್
- ಉಪ್ಪು- 3 ಚಮಚ
ಮಾಡುವ ವಿಧಾನ
- ಟೊಮೊಟೊ ತೊಳೆದು ಕುಕ್ಕರ್ ಗೆ ಹಾಕಿ 4 ರಿಂದ 5 ಬಾರಿ ಕೂಗಿಸಿಕೊಳ್ಳಿ.
- ನಂತರ ಅದನ್ನು ತಣ್ಣಗಾಗಲು ಬಿಡಿ
- ಟಮೊಟೊ ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರ್ ಗೆ ಹಾಕಿ
- ಟೊಮೊಟೊ ಜೊತೆಗೆ, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
- ನಂತರ ಒಂದು ದಪ್ಪ ತಳ ಇರುವ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ
- ಎಣ್ಣೆ ಕಾಯ್ದ ನಂತರ ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಿ
- ನಂತರ ಅದಕ್ಕೆ ಉಪ್ಪು, ಸಕ್ಕರೆ, ವಿನೇಗರ್ ಹಾಕಿ ಕುದಿಸಿ
- ಟೊಮೊಟೋ ಮಿಶ್ರಣ ಪಾತ್ರೆಯ ತಳ ಬಿಡುವವರೆಗೂ ಹಾಕಿ ಕುದಿಸಿ
- ಟೊಮೊಟೊ ಸಾಸ್ ಅನ್ನು ತಣ್ಣಗಾಗಲು ಬಿಡಿ.
- ಟೊಮೊಟೊ ಸಾಸ್, ಬ್ರೆಡ್ ಜೊತೆ , ನೂಡಲ್ಸ್, ಗೋಬಿ ಜೊತೆ ಸವಿಯಲು ಸಿದ್ಧ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.