ಸೋರೆಕಾಯಿ ಬರ್ಫಿ 
ಅಡುಗೆ

ಸೋರೆಕಾಯಿ ಬರ್ಫಿ

ಸೋರೆಕಾಯಿ ಬರ್ಫಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ತುರಿದ ಸೋರೆಕಾಯಿ - 2 ಬಟ್ಟಲು
  • ತುಪ್ಪ - 1 ಬಟ್ಟಲು
  • ಹಾಲು - 1 ಬಟ್ಟಲು
  • ಕೋವಾ - 1 1/2 ಬಟ್ಟಲು
  • ಏಲಕ್ಕಿ ಪುಡಿ - 1 ಚಮಚ
  • ಲವಂಗ - 2
  • ಸಕ್ಕರೆ - 2 ಬಟ್ಟಲು
  • ಡ್ರೈಫ್ರೂಟ್ಸ್ - (ದ್ರಾಕ್ಷಿ, ಬಾಗಾಮಿ, ಗೋಡಂಬಿ, ಗೇರು ಬೀಜ, ಅಕ್ರೂಟ್, ನೆಲಗಡಲೆ) ಅರ್ಧ ಬಟ್ಟಲು
  • ತುರಿದ ತೆಂಗಿನ ಕಾಯಿ - ಅರ್ಧ ಬಟ್ಟಲು
  • ಸೂರ್ಯಕಾಂತಿ ಬೀಜ - 1 ಚಮಚ
  • ಮೆಲನ್ ಬೀಜ - 1 ಚಮಚ

ಮಾಡುವ ವಿಧಾನ...
  • ಮೊದಲು ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು.
  • ನೆಲಗಡಲೆಯನ್ನು ಸಿಪ್ಪೆ ತೆಗೆದು ಬೀಜವನ್ನು ಬಿಡಿಸಿಕೊಳ್ಳಿ.
  • ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಇದಕ್ಕೆ ಏಲಕ್ಕಿ ಪುಡಿ ಹಾಗೂ ಲವಂಗವನ್ನು ಹಾಕಬೇಕು. ನಂತರ ತುರಿದ ಸೋರೆಕಾಯಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
  • ಸೋರೆಕಾಯಿಯಿಂದ ತುಪ್ಪ ಬೇರ್ಪಡುವವರೆಗೆ ಕೈಯಾಡಿಸುತ್ತಿರಬೇಕು.
  • ನಂತರ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ಮತ್ತೊಂದು ಒಲೆಯ ಮೇಲೆ ಹಾಲನ್ನು ಕಾಯಿಸಿ ಅದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಬೇಕು. ಇದನ್ನು ಬೇಯಿಸಿಕೊಂಡ ಸೋರೆಕಾಯಿಗೆ ಹಾಕಿ ಮಿಶ್ರಣವನ್ನು ಮಾಡಬೇಕು.
  • ಸೋರೆಕಾಯಿ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ, ಕೋವಾ ಹಾಗೂ ಕತ್ತರಿಸಿಕೊಂಡ ನಟ್ಸ್ ಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
  • ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ. ಮುಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಉಳಿದ ನಟ್ಸ್ ಗಳನ್ನು ಇದರ ಮೇಲೆ ಹಾಕಿ ಅಲಂಕಾರ ಮಾಡಿ. ಕೆಲಸ ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿರಿಸಿ ತಿಂದರೆ ರುಚಿಕರವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ