ಗೋಧಿ ಹಲ್ವ
ಗೋಧಿ ಹಲ್ವ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಗೋಧಿ ಹಿಟ್ಟು - 1 ಬಟ್ಟಲು
- ತುಪ್ಪ - ಅರ್ಧ ಬಟ್ಟಲು
- ಸಕ್ಕರೆ - 1 ಬಟ್ಟಲು
- ನೀರು - ಸ್ವಲ್ಪ
- ಏಲಕ್ಕಿ ಪುಡಿ - ಅರ್ಧ ಚಮಚ
- ದ್ರಾಕ್ಷಿ, ಗೋಡಂಬಿ - ಸ್ವಲ್ಪ
- ಲವಂಗ ಪುಡಿ - ಚಿಟಿಕೆ
ಮಾಡುವ ವಿಧಾನ...
- ಒಲೆಯ ಮೇಲೆ ಬಾಣಲೆ ಇಟ್ಟು 2 ಚಮಚ ತುಪ್ಪ ಹಾಕಿ ಗೋಧಿ ಹಿಟ್ಟನ್ನು ಕೆಂಪಗೆ ಹುರಿದುಕೊಳ್ಳಬೇಕು.
- ಮತ್ತೊಂದು ಪಾತ್ರೆ ತೆಗೆದುರೊಂದು ಸ್ವಲ್ಪನೀರು ಹಾಗೂ ಸಕ್ಕರೆಯನ್ನು ಹಾಕಿ ಪಾಕವನ್ನು ತಯಾರು ಮಾಡಿಕೊಳ್ಳಬೇಕು.
- ಹುರಿದ ಗೋಧಿ ಹಿಟ್ಟಿಗೆ ಏಲಕ್ಕಿ ಪುಡಿ,ಲವಂಗ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಪಾಕ ಬಿಸಿಯಿರುವಾಗಲೇ ಇದಕ್ಕೆ ಹುರಿದ ಗೋಧಿಹಿಟ್ಟನ್ನು ಹಾಕಿ ಉಂಡೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು. ಸರಿಯಾಗಿ ಹದವಾಗಿ ಬಂದ ನಂತರಇದಕ್ಕೆ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡದ್ರಾಕ್ಷಿ, ಗೋಡಂಬಿಯನ್ನು ಹಾಕಿ ಅಲಂಕರಿಸಿದರೆ ಗೋಧಿಹಲ್ವ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.