ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ
ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಕಲ್ಲಂಗಡಿ ಹಣ್ಣಿನ ತಿರುಳು - 1 ಬಟ್ಟಲು
- ಅಕ್ಕಿ - 2 ಬಟ್ಟಲು
- ಮೆಂತ್ಯೆ - ಅರ್ಧ ಚಮಚ
- ಉದ್ದಿನ ಬೇಳೆ - 1 ಬಟ್ಟಲು
- ಉಪ್ಪು - ರುಚಿಗೆ ತಕ್ಕಷ್ಟು
- ಅಡುಗೆ ಎಣ್ಣೆ - ಅಗತ್ಯಕ್ಕನುಗುಣವಾಗಿ
ಮಾಡುವ ವಿಧಾನ...
- ಅಕ್ಕಿ, ಉದ್ದಿನ ಬೇಳೆ ಹಾಗೂ ಮಂತ್ಯೆಯನ್ನು ತೊಳೆದು 4 ಗಂಟೆಗಳ ಕಾಲ ನೆನೆ ಹಾಕಬೇಕು.
- ಕಲ್ಲಂಗಡಿ ಹಣ್ಣಿ ತಿರುಳನ್ನು ತೆಗೆದುಕೊಂಡುಸಣ್ಣಗೆ ಹೆಚ್ಚಿಕೊಳ್ಳಬೇಕು.
- ಮಿಕ್ಸಿ ಜಾರ್ ತೆಗೆದುಕೊಂಡು ನೆನೆದ ಅಕ್ಕಿ,ಉದ್ದಿನ ಬೇಳೆ ಹಾಗೂ ಕಲ್ಲಂಗಡಿ ಹಣ್ಣಿನ ತಿರುಳು ನೀರುಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿಮಿಶ್ರಣ ಮಾಡಬೇಕು.
- ಅರ್ಧ ಗಂಟೆಯ ಬಳಿಕ ಒಲೆಯ ಮೇಲೆ ಕಾವಲಿ ಇಟ್ಟುಬಿಸಿಯಾದ ನಂತರ ಹಿಟ್ಟನ್ನು ತೆಳ್ಳಗೆ ದೋಸೆ ಆಕಾರದಲ್ಲಿ ಹಾಕಬೇಕು. ನಂತರ ಎಣ್ಣೆ ಹಾಕಿ ಕೆಂಪಗೆಕಾಯಿಸಿದರೆ. ರುಚಿಕರವಾದ ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ ಸವಿಯಲು ಸಿದ್ಧವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.