ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ರವೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ನೀರು ಹಾಕಿ ಚಪಾತಿ ಹಿಟ್ಟಿನಂತೆ ಹಿಟ್ಟು ತಯಾರು ಮಾಡಿಕೊಳ್ಳಬೇಕು. ತೇವವಾದ ಕಾಟನ್ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ 20 ನಿಮಿಷ ಕಾಲ ನೆನೆಯಲು ಬಿಡಿ.
ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಜೀರಿಗೆ, ಸೋಂಪು, ಹಸಿಮೆಣಸಿನ ಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಅರಿಶಿನ, ಅಚ್ಚ ಖಾರದ ಪುಡಿ, ಗರಂ ಮಸಾಲ, ಅಮ್ಚೂರ್ ಪುಡಿ, ಇಂಗು ಹಾಗೂ ಬೇಯಿಸಿದ ಆಲೂ, ಉಪ್ಪು ಹಾಕಿ ಚೆನ್ನಾಗಿ ಹುರಿಯಬೇಕು.
ಬಳಿಕ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕಕೊಂಡು ಮಧ್ಯೆ ಈಗಾಗಲೇ ಮಾಡಿಕೊಂಡ ಆಲೂ ಮಸಾಲೆಯನ್ನು ಹಾಕಿ ಕಚೋರಿ ರೀತಿಯಲ್ಲಿ ತಯಾರು ಮಾಡಿಕೊಳ್ಳಬೇಕು.
ಬಳಿಕ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆಯನ್ನು ಹಾಕಿ ಒಂದಾದಾಗಿ ಮಾಡಿಕೊಂಡ ಕಚೋರಿಗಳನ್ನು ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಂಡರೆ ರುಚಿಕರವಾದ ಆಲೂ ಕಚೋರಿ ಸವಿಯಲು ಸಿದ್ಧ.