ಮೊದಲು ಪ್ಯಾನ್ ತೆಗೆದುಕೊಂಡು ಅದಕ್ಕೆ ಖೋವಾ ಹಾಕಿ ಬಿಸಿ ಮಾಡಿಕೊಳ್ಳಬೇಕು.
5 ನಿಮಿಷಗಳ ಕಾಲ ಖೋವಾವನ್ನು ಹುರಿದುಕೊಳ್ಳಬೇಕು. ನಂತರ ತುಪ್ಪ ಹಾಕಿ ಕೈಯಾಡಿಸುತ್ತಲೇ ಇರಬೇಕು.
ತುಪ್ಪ ಮತ್ತು ಖೋವಾ ಎರಡೂ ಚೆನ್ನಾಗಿ ಮಿಶ್ರಣಗೊಂಡ ಬಳಿಕ ಇದಕ್ಕೆ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಮಿಶ್ರಣವಾಗಿ ತಳ ಬಿಡುತ್ತಿದ್ದಂತೆಯೇ ಹಾಲು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2 ನಿಮಿಷ ಒಲೆಯ ಮೇಲೆ ಬಿಡಬೇಕು. ತಟ್ಟೆಯೊಂದಕ್ಕೆ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಪೇಡಾ ಆಕಾರಕ್ಕೆ ಕತ್ತರಿಸಿ ಪಿಸ್ತಾದಿಂದ ಅಲಂಕರಿಸಿದರೆ ರುಚಿಕರವಾದ ದೂದ್ ಪೇಡಾ ಸವಿಯಲು ಸಿದ್ಧ.