ಮೊದಲು ರಾಗಿ ಹಿಟ್ಟನ್ನು ಪಾತ್ರಯೊಂದಕ್ಕೆ ಹಾಕಿ, ಅದಕ್ಕೆ ಈರುಳ್ಳು, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಿಸಿನ ಕಾಯಿ, ಕಡಲೆಕಾಯಿ ಬೀಜ, ಎಳ್ಳು, ಉಪ್ಪು ಹಾಗೂ ನೀರು ಸೇರಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾಗಲು ಬಿಡಬೇಕು.
ಬಟರ್ ಪೇಪರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಂಡ ರಾಗಿ ಹಿಟ್ಟನ್ನು ಬಾಲ್ ಗಾತ್ರದಲ್ಲಿ ತೆಗೆದುಕೊಂಡು ಇಟ್ಟು ಮತ್ತೊಂದು ಬಟರ್ ಪೇಪರ್ ನ್ನು ಇಟ್ಟು ರೊಟ್ಟಿಯಂತೆ ತಟ್ಟಬೇಕು.
ಕಾದ ತವಾಗೆ ಸ್ವಲ್ಪ ಎಣ್ಣೆ ಹಾಕಿ ತಟ್ಟಿಕೊಂಡ ರೊಟ್ಟಿಯನ್ನು ಹಾಗಿ ಹಿಂದೆ ಹಾಗೂ ಮುಂದೆ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟು, ಮೇಲೆ ಸ್ವಲ್ಪ ತುಪ್ಪವನ್ನು ಹಾಕಿದರೆ ರುಚಿಕರವಾದ ಹಾಗೂ ಆರೋಗ್ಯಕರ ರಾಗಿ ರೊಟ್ಟಿ ಸವಿಯಲು ಸಿದ್ಧ.