ಮೊದಲು ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಚ್ಚಿದ ಗೆಣಸು, ಸ್ವಲ್ಪ ನೀರು, ಹಾಗೂ ಚಿಟಿಕೆ ಉಪ್ಪು ಹಾಕಿ ಗೆಣಸನ್ನು ಬೇಯಿಸಿಕೊಳ್ಳಬೇಕು.
ನಂತರ ನೀರು ಹಾಗೂ ಗೆಣಸನ್ನು ಪ್ರತ್ಯೇಕ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಪ್ಯಾನ್ ಇಟ್ಟು ತೆಂಗಿನ ಹಾಲು ಹಾಕಬೇಕು. ನಂತರ ಬೆಲ್ಲವನ್ನು ಹಾಕಿ ಬೆಲ್ಲ ಕರಗಲು ಬಿಡಬೇಕು.
ಒಲೆಯ ಮೇಲೆ ಮತ್ತೊಂದು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಬೇಕು. ಬಿಸಿಯಾದ ಬಳಿಕ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ಬೆಲ್ಲ ಕರಗಿದ ಬಳಿಕ ಬೆಂದ ಗೆಣಸನ್ನು ಅದಕ್ಕೆ ಸೇರಿಸಬೇಕು. 5-10 ನಿಮಿಷ ಕುದಿಯಲು ಬಿಡಬೇಕು. ನಂತರ ಏಲಕ್ಕಿ ಪುಡಿಯನ್ನು ಹಾಕಿ, ಇದಕ್ಕೆ ಹುರಿದುಕೊಂಡ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರವಾದ ಸಿಹಿಗೆಣಸಿನ ಪಾಯಸ ಸವಿಯಲು ಸಿದ್ಧ.