- ಬ್ರೆಡ್ ಸ್ಲೈಸ್ ಗಳು -10-12
- ರವೆ - ಅರ್ಧ ಬಟ್ಟಲು
- ಮೊಸರು - ಅರ್ಧ ಬಟ್ಟಲು
- ಅಕ್ಕಿ ಹಿಟ್ಟು - ಒಂದೂವರೆ ಬಟ್ಟಲು
- ಅಡುಗೆ ಸೋಡಾ - ಚಿಟಿಕೆ
- ಉಪ್ಪು - ರುಚಿಗೆ ತಕ್ಕಷ್ಟು
- ಒಗ್ಗರಣೆಗೆ ಬೇಕಾಗುವ ಪದಾರ್ಥಗಳು
- ಎಣ್ಣೆ - 2-3 ಚಮಚ
- ಜೀರಿಗೆ - ಸ್ವಲ್ಪ
- ಸಾಸಿವೆ - ಸ್ವಲ್ಪ
- ಉದ್ದಿನಬೇಳೆ, ಕಡಲೆಬೇಳೆ - ಸ್ವಲ್ಪ
- ಕರಿಬೇವು - 3-4 ಹೆಚ್ಚಿದ್ದು
- ಹಸಿಮೆಣಿಸಿನ ಕಾಯಿ - 3-4 ಹೆಚ್ಚಿದ್ದು
- ಈರುಳ್ಳಿ - 1 ಸಣ್ಣದಾಗಿ ಹೆಚ್ಚಿದ್ದು
- ಬ್ರೆಡ್ ನ ನಾಲ್ಕು ಬದಿಯಲ್ಲಿರುವ ಕಂದು ಬಣ್ಣದ ಭಾಗವನ್ನು ಕತ್ತರಿಸಿ ತೆಗೆದುಕೊಳ್ಳಬೇಕು.
- ನೀರಿನಲ್ಲಿ 2 ನಿಮಿಷಗಳ ಕಾಲ ಬ್ರೆಡ್ ತುಂಡುಗಳನ್ನು ನೆನೆ ಹಾಕಬೇಕು.
- ಪಾತ್ರೆಯೊಂದಕ್ಕೆ ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿ ಹಿಟ್ಟ ದಪ್ಪಗಿರುವಂತೆ ಕಲಸಿಕೊಳ್ಳಬೇಕು.
- ನೀರಿನಿಂದ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹಿಸುಕಬೇಕು. ನಂತರ ಇದನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟಿನಲ್ಲಿ ಯಾವುದೇ ಗಂಟುಗಳು ಇರದಂತೆ ನೋಡಿಕೊಳ್ಳಬೇಕು.
- ನಂತರ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಒಗ್ಗರಣೆಯ ಎಲ್ಲಾ ಪದಾರ್ಥಗಳನ್ನು ಹಾಕಿ ಕೆಂಪಗೆ ಮಾಡಿಕೊಂಡು ಇದನ್ನು ಹಿಟ್ಟಿನೊಳಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸೌಟಿನಿಂದ ಹಿಟ್ಟನ್ನು ಹಾಕಿ ದೋಸೆಯಾಕಾರಕ್ಕೆ ಬರುವಂತೆ ಮಾಡಿ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಬ್ರೆಡ್ ದೋಸೆ ಸವಿಯಲು ಸಿದ್ಧ.