- ಆಲೂಗಡ್ಡೆ - ಬೇಯಿಸಿದ್ದು 2-4
- ಮೈದಾ ಹಿಟ್ಟು- 150 ಗ್ರಾಂ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಅರಿಶಿನದ ಪುಡಿ - ಸ್ವಲ್ಪ
- ಅಚ್ಚ ಖಾರದ ಪುಡಿ - ಅರ್ಧ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಬೇಯಿಸಿದ ಆಲೂಗಡ್ಜೆಯನ್ನು ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಮೈದಾ ಹಿಟ್ಟು, ಅರಿಶಿನ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಸ್ವಲ್ಪ ನೀರು ಹಾಕಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಬೇಕು. ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ನೆನೆಯಲು ಬಿಡಬೇಕು.
- ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ ಲಟ್ಟಿಸಿಕೊಳ್ಳಬೇಕು.
- ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಲಟ್ಟಿಸಿಕೊಂಡ ಪೂರಿಗಳನ್ನು ಅದಕ್ಕೆ ಹಾಕಿ ಕೆಂಪಗೆ ಸುಟ್ಟರೆ, ರುಚಿಕರವಾದ ಆಲೂ ಪೂರಿ ಸವಿಯಲು ಸಿದ್ಧ.