- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಕರಿಬೇವು - ಸ್ವಲ್ಪ
- ಹಸಿಮೆಣಸಿನ ಕಾಯಿ - 4-5
- ಶುಂಠಿ ಪೇಸ್ಟ್ -ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಖಾರದ ಪುಡಿ- ಅರ್ಧ ಚಮಚ
- ಮೈದಾ - ಆರ್ಧ ಬಟ್ಟಲು
- ಮೊಸರು - ಸ್ವಲ್ಪ
- ನಿಂಬೆಹಣ್ಣಿನ ರಸ - ಸ್ವಲ್ಪ
- ಎಣ್ಣೆ - ಕರಿಯಲು
- ಮೊದಲು ಪಾತ್ರೆಯೊಂದರನ್ನು ತೆಗೆದುಕೊಂಡು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು. ಶುಂಠಿ ಪೇಸ್ಟ್, ಉಪ್ಪು, ಖಾರದಪುಡಿ, ಮೈದಾ, ನಿಂಬೆಹಣ್ಣಿನ ರಸ, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಬೇಕು. ಎಣ್ಣೆ ಕಾದ ಬಳಿಕ ಬೇಬಿ ಕಾರ್ನ್ ಗಳನ್ನು ಆರ್ಧಕ್ಕೆ ಹಾಗೂ ಉದ್ದಕ್ಕೆ ಹೆಚ್ಚಿಕೊಂಡು, ಮಸಾಲೆ ಮಿಶ್ರಣಕ್ಕೆ ಅದ್ದಿ ಕಾದ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಕರಿದುಕೊಂಡರೆ ರುಚಿಕರವಾದ ಬೇಬಿ ಕಾರ್ನ್ 65 ಸವಿಯಲು ಸಿದ್ಧ.