- ಇಡ್ಲಿ ಹಿಟ್ಟು - 2 ಬಟ್ಟಲು
- ಕರಿಬೇವು- 5-6 ಎಳೆ
- ಸಾಸಿವೆ - ಸ್ವಲ್ಪ
- ಇಂಗು- ಚಿಟಿಕೆ
- ಈರುಳ್ಳಿ-ಸಣ್ಣಗೆ ಹೆಚ್ಚಿದ್ದು
- ಜೀರಿಗೆ- ಸ್ವಲ್ಪ
- ಎಣ್ಣೆ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಹಸಿಮೆಣಸಿನ ಕಾಯಿ - 4
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಮೊದಲು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಬೇಕು.
- ನಂತರ ಹಸಿಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು.
- ಹಿಟ್ಟು ತೆಗೆದುಕೊಂಡು ಅದಕ್ಕೆ ಈ ಒಗ್ಗರಣೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಇಡ್ಲಿ ತಟ್ಟೆಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು. ನಂತರ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಮಸಾಲೆ ಇಡ್ಲಿ ಸವಿಯಲು ಸಿದ್ಧ.