- ರಾಗಿ ಹಿಟ್ಟು - 1 ಬಟ್ಟಲು
- ತೆಂಗಿನ ತುರಿ - ಅರ್ಧ ಬಟ್ಟಲು
- ಮೊಸರು - ಅರ್ಧ ಬಟ್ಟಲು
- ನೀರು - ಅಗತ್ಯಕ್ಕೆ ಅನುಸಾರವಾಗಿ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಅಗತ್ಯಕ್ಕೆ ಅನುಸಾರವಾಗಿ
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಆದಕ್ಕೆ ರಾಗಿ ಹಿಟ್ಟು, ತೆಂಗಿನ ತುರಿ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಮತ್ತೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನಂತೆ ಕಲಸಿಕೊಳ್ಳಬೇಕು.
- ಒಲೆಯ ಮೇಲೆ ತವಾ ಇಟ್ಟು ಕಾಯಬಿಟ್ಟು. ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಮಿಶ್ರಣ ಮಾಡಿಕೊಂಡ ರಾಗಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ದೋಸೆ ಸವಿಯಲು ಸಿದ್ಧ.