ದಾಳಿಂಬೆ-ನಿಂಬೆ ರಸ
ದಾಹ ನೀಗಿಸುವ ದಾಳಿಂಬೆ-ನಿಂಬೆ ರಸ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ತಂಪಾದ ನೀರು - 1 ಲೋಟ
- ನಿಂಬೆಹಣ್ಣಿನ ರಸ - ಸ್ವಲ್ಪ
- ದಾಳಿಂಬೆ ರಸ - 1 ಲೋಟ
- ಪುದೀನಾ ಎಲೆ- 4-5
- ಸಕ್ಕರೆ - 1-2 ಚಮಚ
ಮಾಡುವ ವಿಧಾನ...
- ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸಕ್ಕರೆ ಹಾಗೂ ಪುದೀನ ಎಲೆಗಳನ್ನು ಹಾಕಬೇಕು. ಸಕ್ಕರೆ ಕರುವವರೆಗೂ ಕೈಯಾಡಿಸಿ ತೆಗೆಯಬೇಕು.
- ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ದಾಳಿಂಬೆ ಹಾಗೂ ನಿಂಬೆ ರಸ, ಬಿಸಿ ಮಾಡಿದ್ದ ಸಕ್ಕರೆ ಪಾಕವನ್ನು ಹಾಕಿ ಜ್ಯೂಸ್ ತಯಾರು ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಲೋಟಕ್ಕೆ ಹಾಕಿ ಫ್ರಿಡ್ಜ್ ನಲ್ಲಿಡಬೇಕು. ತಣ್ಣಗಾದ ಬಳಿಕ ಪುದೀನಾ ಎಲೆಗಳೊಂದಿಗೆ ಅಲಂಕರಿಸಿದರೆ, ರುಚಿಕವಾದ ದಾಳಿಂಬೆ-ನಿಂಬೆ ರಸ ಕುಡಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.