ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಡುಗೆ

ಡ್ರೈ ಗುಲಾಬ್ ಜಾಮೂನ್

ರುಚಿಕರವಾದ ಡ್ರೈ ಗುಲಾಬ್ ಜಾಮೂನ್ ಮಾಡುವ ವಿಧಾನ...

ಡ್ರೈ ಗುಲಾಬ್ ಜಾಮೂನ್
Manjula VN
Updated On : 17 Apr 2018, 11:51 am
ಬೇಕಾಗುವ ಪದಾರ್ಥಗಳು
  • ಸಕ್ಕರೆ- 1.5 ಬಟ್ಟಲು
  • ನೀರು - 1.5 ಬಟ್ಟಲು
  • ಕೇಸರಿ - 3-4 ದಳ
  • ಏಲಕ್ಕಿ ಪುಡಿ - ಚಿಟಿಕೆ
  • ನಿಂಬೆ ರಸ- ಸ್ವಲ್ಪ
  • ಹಾಲಿನ ಪುಡಿ - 1 ಬಟ್ಟಲು
  • ಮೈದಾ ಹಿಟ್ಟು - ಮುಕ್ಕಾಲು ಬಟ್ಟಲು
  • ರವೆ - 1 ಚಮಚ
  • ಬೇಕಿಂಗ್ ಪೌಡರ್ - ಚಿಟಿಕೆ
  • ತುಪ್ಪ - ಸ್ವಲ್ಪ
  • ಡೆಸಿಕೇಟೆಡ್ ಕೊಕೋನಟ್/ತರಿತರಿಯಾಗಿ ಪುಡಿ ಮಾಡಿದ ಕೊಬ್ಬರಿ ತುರಿ - 1 ಬಟ್ಟಲು
  • ಮೊಸರು - 1 ಚಮಚ
  • ಬಿಸಿ ಹಾಲು -3-4 ಚಮಚ
ಮಾಡುವ ವಿಧಾನ...

Advertisement

Advertisement

  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ, ಸಕ್ಕರೆ, ನೀರು, ಏಲಕ್ಕಿ ಪುಡಿ, ನಿಂಬೆ ರಸವನ್ನು ಹಾಕಿ ಪಾಕ ತಯಾರು ಮಾಡಿಟ್ಟುಕೊಳ್ಳಬೇಕು. 
  • ನಂತರ ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಹಾಲಿನ ಪುಡಿ, ಮೈದಾ, ರವೆ, ಬೇಕಿಂಗ್ ಪೌಡರ್, ತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದಕ್ಕೆ ಮೊಸರು, ಬಿಸಿ ಹಾಲು ಹಾಕುತ್ತಾ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟನ್ನು ತಯಾರಿ ಮಾಡಿಕೊಳ್ಳಬೇಕು. 
  • ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪ ಸಣ್ಣ ಉರಿಯಲ್ಲಿ ತುಪ್ಪನ್ನು ಕಾಯಿಸಿ, ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿಯೇ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಬೇಕು. 
  • ನಂತರ ಈ ಉಂಡೆಗಳನ್ನು ತಣ್ಣಗಾದ ಪಾಕಕ್ಕೆ ಹಾಕಿ, ಅರ್ಧ ಗಂಟೆಗಳ ಬಳಿಕ ತೆಗೆದು ಕೊಬ್ಬರಿ ತುರಿಯಲ್ಲಿ ಹೊರಳಿಸಿದರೆ, ರುಚಿಕರವಾದ ಡ್ರೈ ಗುಲಾಬ್ ಜಾಮೂನ್ ಸವಿಯಲು ಸಿದ್ಧ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments