ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಆಲೂ ಸ್ಮೈಲ್ಸ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
ಬೇಯಿಸಿದ ಆಲೂ ಗಡ್ಡೆ- 2 ಬಟ್ಟಲು
ಬ್ರೆಡ್ ಕ್ರಮ್ಬ್ಸ್- 1/4 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಕಾರ್ನ್ ಫ್ಲೋರ್ (ಜೋಳದ ಹಿಟ್ಟು)- 2 ಚಮಚ
ಅಚ್ಚ ಖಾರದ ಪುಡಿ- ಅರ್ಧ ಚಮಚ
ಎಣ್ಣೆ- ಕರಿಯಲು
ಮಾಡುವ ವಿಧಾನ...
ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಬ್ರೆಡ್ ಕ್ರಮ್ಬ್ಸ್, ಉಪ್ಪು, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಇದು ತಣ್ಣಗಾಗಲು ಫ್ರಿಡ್ಜ್ ನಲ್ಲಿಟ್ಟು 30 ನಿಮಿಷ ಬಿಡಬೇಕು.
ಫ್ರಿಡ್ಜ್ ನಿಂದ ತೆಗೆದ ಈ ಹಿಟ್ಟನ್ನು ಎರಡು ಭಾಗ ಮಾಡಿಕೊಂಡು ಒಂದೊಂದು ಭಾಗವನ್ನು ಮಂದಕ್ಕೆ ತಟ್ಟಬೇಕು.
ನಂತರ ಸಣ್ಣ ಸಣ್ಣದಾಗಿ ವೃತ್ತಾಕಾರಕ್ಕೆ ಕತ್ತರಿಸಿಕೊಂಡು ವೃತ್ತಾಕಾರದ ಹಿಟ್ಟಿನ ಮೇಲೆ ಎರಡು ಬದಿಯಲ್ಲಿ ಒತ್ತಿ ಕಣ್ಣುಗಳು ಹಾಗೂ ಸ್ಪೂನ್ ನಿಂದ ಸ್ಮ್ಲೈಲ್ ಗಳನ್ನು ಮಾಡಿ ಸ್ಮೈಲಿ ಗೊಂಬೆಯಂತೆ ಅಲಂಕರಿಸಬೇಕು. ಬೇಕಾದ ಆಕಾರದಲ್ಲಿಯೂ ಕೂಡ ಅಲಂಕರಿಸಬಹುದು.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಚೆನ್ನಾಗಿ ಕಾದ ನಂತರ ಒಂದೊಂದಾಗಿ ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಆಲೂ ಸ್ಮೈಲ್ಸ್ ಸವಿಯಲು ಸಿದ್ಧ.