ವೆಜಿಟೆಬಲ್ ರೈಸ್ ಬಾತ್
ರುಚಿಕರವಾದ ವೆಜಿಟೆಬಲ್ ರೈಸ್ ಬಾತ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಎಣ್ಣೆ- 2-3 ಚಮಚ
- ಪಲಾವ್ ಎಲೆ- 1 -2
- ಚಕ್ಕೆ- ಸ್ವಲ್ಪ
- ಲವಂಗ- 2-3
- ಏಲಕ್ಕಿ- 2
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
- ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 1-2
- ಬೀನ್ಸ್- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
- ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
- ಬಟಾಣಿ- 1 ಚಿಕ್ಕ ಬಟ್ಟಲು
- ಬಾಸುಮತಿ ಅಕ್ಕಿ - 20 ನಿಮಿಷ ನೆನೆಸಿದ್ದು 1 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ನಿಂಬೆ ಹಣ್ಣಿನ ರಸ- 1 ಚಮಚ
- ಕೊತ್ತಂಬರಿ ಸೊಪ್ಪು- ಸಣ್ಮಗೆ ಕತ್ತರಿಸಿದ್ದು ಸ್ವಲ್ಪ
ಮಾಡುವ ವಿಧಾನ...
- ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ 2-3 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕಂಪಗೆ ಹುರಿದುಕೊಳ್ಳಬೇಕು.
- ನಂತರ ಬೀನ್ಸ್, ಕ್ಯಾರೆಟ್, ಬಟಾಣಿ, ಉಪ್ಪು ಹಾಗೂ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ 5 ನಿಮಿಷ ಬೇಯಿಸಿಕೊಳ್ಳಬೇಕು.
- ನಂತರ ನೆನೆಸಿದ ಅಕ್ಕಿ ಹಾಗೂ ಎರಡು ಬಟ್ಟಲು ನೀರು, ಹಾಕಿ 20 ನಿಮಿಷ ಬೇಯಿಸಿದರೆ, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ವೆಜಿಟೇಬರ್ ರೈಸ್ ಬಾತ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.