ಬಟಾಣಿ ಪಲಾವ್
ರುಚಿಕರವಾದ ಬಟಾಣಿ ಪಲಾವ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ತುಪ್ಪ - 2 ಚಮಚ
- ಪಲಾವ್ ಎಲೆ - 1-2
- ಚಕ್ಕೆ - 1
- ಮರಾಠಿ ಮೊಗ್ಗು - 1
- ಕಾಳು ಮೆಣಸು - 10
- ಲವಂಗ - 3-4
- ಜೀರಿಗೆ - ಸ್ವಲ್ಪ
- ಗೋಡಂಬಿ - 6
- ಬಾಸುಮತಿ ಅಕ್ಕಿ - 1 ಬಟ್ಟಲು (30 ನಿಮಿಷ ನೆನೆಸಿದ್ದು)
- ಉಪ್ಪು- ರುಚಿಗೆ ತಕ್ಕಷ್ಟು
- ಗರಂ ಮಸಾಲಾ - ಅರ್ಧ ಚಮಚ
- ಬಟಾಣಿ - ಮುಕ್ಕಾಲು ಬಟ್ಟಲು
ಮಾಡುವ ವಿಧಾನ...
- ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಬೇಕು.
- ತುಪ್ಪ ಕಾದ ನಂತರ ಪಲಾವ್ ಎಲೆ, ಚಕ್ಕೆ, ಮರಾಠಿ ಮೊಗ್ಗು, ಕಾಳು ಮೆಣಸು, ಲವಂಗ, ಜೀರಿಗೆ, ಗೋಡಂಬಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಬಾಸುಮತಿ ಅಕ್ಕಿ, ಉಪ್ಪು, ಗರಂ ಮಸಾಲಾ, ಬಟಾಣಿ, ಮುಕ್ಕಾಲು ಬಟ್ಟಲು 3 ನಿಮಿಷ ಹುರಿದುಕೊಳ್ಳಬೇಕು.
- ಬಳಿಕ ಅಕ್ಕಿಯನ್ನು ಅಳತೆ ಮಾಡಿಕೊಂಡ ಬಟ್ಟಲಿನಲ್ಲಿ ಮುಕ್ಕಾಲು ಬಟ್ಟಲು ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿಕೊಂಡರೆ, ರುಚಿಕರವಾದ ಬಟಾಣಿ ಪಲಾವ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.