ದಕ್ಷಿಣ ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಕರ ಸಂಕ್ರಾಂತಿಗೆ ಸಿಹಿತಿಂಡಿ ಅತ್ತಿರಸ ಮಾಡುವುದು ಕೂಡ ಮುಖ್ಯ. ಬೆಳ್ತಿಗೆ ಅಕ್ಕಿಯಿಂದ ಮಾಡುವ ಸಾಂಪ್ರದಾಯಿಕ ತಿನಿಸು ಅತ್ತಿರಸ.
3/4 ಕೆಜಿ ಬೆಲ್ಲ (ತುರಿದದ್ದು)
2 ಚಮಚ ಹುರಿದ ಬಿಳಿ ಎಳ್ಳು ಬೀಜ(ಬೇಕೆಂದರೆ)
- ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ
- ರಾತ್ರಿಯಿಡೀ ನೀರಲ್ಲಿ ನೆನೆಸಿಟ್ಟು ಬೆಳಗ್ಗೆ ನೀರನ್ನು ಚೆನ್ನಾಗಿ ಬಸಿದುಕೊಳ್ಳಿ.
- ಗ್ರೈಂಡರ್ ಅಥವಾ ಮಿಕ್ಸಿಗೆ ಅಕ್ಕಿಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
- ಅಕ್ಕಿಹಿಟ್ಟು ತೇವವಾಗಿರಬೇಕು
- ತುರಿದಿಟ್ಟುಕೊಂಡ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ ಅದನ್ನು ಕಡಾಯಿ ಅಥವಾ ಬಾಣಲೆಯಲ್ಲಿ ಹಾಕಿ ಹದ ಬರುವವರೆಗೆ ಬಿಸಿ ಮಾಡಿಕೊಳ್ಳಿ.
- ಬೆಲ್ಲ ಪಾಕದಲ್ಲಿ ಕಸ, ಮರಳು ಇದ್ದರೆ ಜರಡಿಗೆ ಹಾಕಿ ಸ್ವಚ್ಛ ಮಾಡಿಕೊಳ್ಳಿ.
- ನಂತರ ಬಾಣಲೆಗೆ ಬೆಲ್ಲ ಪಾಕಿ ಸಿರಪ್ ಹದ ಬರುವವರೆಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ.
- ನಂತರ ಅದಕ್ಕೆ ಅಕ್ಕಿಹಿಟ್ಟು ಹಾಕಿ ನಿಧಾನವಾಗಿ ಸೌಟಿನಿಂದ ಕದಡುತ್ತಾ ಬನ್ನಿ.ಯಾವುದೇ ಕಾರಣಕ್ಕೂ ಉಂಡೆ ಕಟ್ಟಬಾರದು.
- ಪಾಕ ಗಟ್ಟಿಯಾಗುತ್ತಾ ಬಂದಾಗ ಒಲೆಯಿಂದ ಕೆಳಗಿಳಿಸಿ ದೊಡ್ಡ ಉಂಡೆಯಾಕಾರ ಮಾಡಿಟ್ಟುಕೊಳ್ಳಿ.
- ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ನಲ್ಲಿ ಇಟ್ಟು ತೆಳುವಾಗಿ ಪೂರಿಯ ಆಕಾರಕ್ಕೆ ಮಾಡಿಟ್ಟುಕೊಳ್ಳಿ.
- ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
- ಎಣ್ಣೆಯಲ್ಲಿ ಪೂರಿಯಾಕಾರದ ಹಿಟ್ಟನ್ನು ಒಂದೊಂದನ್ನೇ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆಯಿರಿ.
- ಅದನ್ನು ಬಿಸಿಯಿರುವಾಗಲೇ ಹುರಿದಿಟ್ಟುಕೊಂಡ ಎಳ್ಳು ಬೀಜಕ್ಕೆ ಅದ್ದಿ. ಅತ್ತಿರಸ ಸಿದ್ದ. ಎಳ್ಳು ಬೇಡವೆಂದವರು ಬಳಸಬೇಕಾಗಿಲ್ಲ.
- ಆರಿದ ಮೇಲೆ ಡಬ್ಬದಲ್ಲಿ ಹಾಕಿಡಿ. ಎರಡು ವಾರಕ್ಕೂ ಅಧಿಕ ಕಾಲ ಇಟ್ಟು ತಿನ್ನಬಹುದು.