ಕ್ಯಾರೆಟ್ ಚಟ್ನಿ
ರುಚಿಕರ ಹಾಗೂ ಆರೋಗ್ಯಕರವಾದ ಕ್ಯಾರೆಟ್ ಚಟ್ನಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಕಡಲೆಬೇಳೆ - ಸ್ವಲ್ಪ
- ಉದ್ದಿನ ಬೇಳೆ - ಸ್ವಲ್ಪ
- ಒಣಗಿದ ಮೆಣಸಿನ ಕಾಯಿ - ಸ್ವಲ್ಪ
- ಎಣ್ಣೆ - ಸ್ವಲ್ಪ
- ಈರುಳ್ಳಿ - ಕತ್ತರಿಸಿದ್ದ 1
- ಬೆಳ್ಳುಳ್ಳಿ - 3 ಎಸಳು
- ಕ್ಯಾರೆಟ್ - 1 ಬಟ್ಟಲು
- ಕಾಯಿ ತುರಿ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಹುಣಸೆಹಣ್ಣು - ಸ್ವಲ್ಪ
ಮಾಡುವ ವಿಧಾನ...
- ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನ ಬೇಳೆ, ಒಣಗಿದ ಮೆಣಸಿನಕಾಯಿ ಹಾಯಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್ ಹಾಕಿ ಹುರಿದುಕೊಳ್ಳಬೇಕು. ಬಳಿಕ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡ ಮಿಶ್ರಣವನ್ನು ಹಾಕಿ ಉಪ್ಪು, ಕಾಯಿತುರಿ, ಉಪ್ಪು ಹಾಗೂ ಹುಣಸೆಹಣ್ಣು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಭಬೇಕು.
- ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ರುಬ್ಬಿಕೊಂಡ ಚಟ್ನಿಗೆ ಹಾಕಿದರೆ, ರುಚಿಕರ ಹಾಗೂ ಆರೋಗ್ಯಕರವಾದ ಕ್ಯಾರೆಟ್ ಚಟ್ನಿ ಸವಿಯಲು ಸಿದ್ಧ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.