- ಅಕ್ಕಿ ಹಿಟ್ಟು - 2 ಬಟ್ಟಲು
- ಕಡಲೆಹಿಟ್ಟು - ಅರ್ಧ ಬಟ್ಟಲು
- ಹುರಿಗಡಲೆ ಪುಡಿ - 2 ಚಮಚ
- ಇಂಗು - ಚಿಟಿಕೆ
- ಜೀರಿಗೆ - 1 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬೆಣ್ಣೆ - 1-2 ಚಮಚ
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಪಾತ್ರೆಯೊಂದರನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಕಡಲೆಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಇಂಗು, ಉಪ್ಪು, ಬೆಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನ
- ನಂತರ ಸ್ವಲ್ಪ, ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು.
- ಬಳಿಕ ಚಕ್ಕುಲಿ ಒರಳಿಗೆ ಈ ಹಿಟ್ಟನ್ನು ಹಾಕಿ ಒತ್ತುತ್ತಾ ಎಣ್ಣೆಯಲ್ಲಿ ಬಿಡಬೇಕು. ಉರಿ ತುಂಬಾ ಜೋರಾಗಿ ಇಟ್ಟುಕೊಳ್ಳಬಾರದು. ಉರಿ ಜೋರಾಗಿದ್ದರೆ, ಚಕ್ಕುಲಿ ಚೆನ್ನಾಗಿ ಬೇಯುವುದಿಲ್ಲ, ಮಧ್ಯಮ ಉರಿಯಲ್ಲಿ ಕೆಂಪಗೆ ಕರಿದುಕೊಂಡರೆ ರುಚಿಕರವಾದ ಬೆಣ್ಣೆ ಮುರುಕು ಸವಿಯಲು ಸಿದ್ಧ.