ಕಪ್ ಬರ್ಫಿ
ನಿಮಿಷಗಳಲ್ಲಿ ಹಾಗೂ ರುಚಿಕರವಾದ ಕಪ್ ಬರ್ಫಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಕಡಲೆ ಹಿಟ್ಟು - 1 ಬಟ್ಟಲು
- ಕೊಬ್ಬರಿ ಪುಡಿ - ಅರ್ಧ ಬಟ್ಟಲು
- ಗೋಡಂಬಿ ಪುಡಿ - ಅರ್ಧ ಬಟ್ಟಲು
- ಸಕ್ಕರೆ - 1 ಬಟ್ಟಲು
- ಹಾಲು - ಅರ್ಧ ಬಟ್ಟಲು
- ತುಪ್ಪ - ಅರ್ಧ ಬಟ್ಟಲು
- ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ...
- ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಕಡಲೆ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಕೊಬ್ಬರಿ ಪುಡಿ, ಗೋಡಂಬಿ ಪುಡಿ, ಸಕ್ಕರೆ, ಹಾಲು, ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಮಿಶ್ರಣ ಗಟ್ಟಿಯಾಗಿ ಪಾತ್ರೆಯ ತಳ ಅಂಟಿಕೊಳ್ಳದಂತೆ ಗಟ್ಟಿಯಾಗುವವರೆಗೂ ಕೈಯಾಡುತ್ತಿರಬೇಕು.
- ನಂತರ ಏಲಕ್ಕಿ ಪುಡಿ ಹಾಕಿ 2 ನಿಮಿಷ ಕೈಯಾಡಿಸಿ, ಕೆಳಗಿಳಿಸಿ ತುಪ್ಪ ಸವರಿಸಿದ ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡರೆ ಕಪ್ ಬರ್ಫಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.