ಮಿರ್ಚಿ ಫ್ರೈ
ರುಚಿಕರವಾದ ಮಿರ್ಚಿ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಹಸಿಮೆಣಸಿನ ಕಾಯಿ - 10
- ಕಡೆಲಕಾಯಿ ಬೀಜದ ಪುಡಿ
- ಅಚ್ಚ ಖಾರದ ಪುಡಿ - ಅರ್ಧ ಚಮಚ
- ಅರಿಶಿಣದ ಪುಡಿ - ಕಾಲು ಚಮಚ
- ದನಿಯಾ ಪುಡಿ - 1 ಚಮಚ
- ಗರಂ ಮಸಾಲಾ - ಅರ್ಧ ಚಮಚ
- ಜೀರಿಗೆ ಪುಡಿ- ಅರ್ಧ ಚಮಚ
- ಮಾವಿನ ಪುಡಿ (ಆಮ್ ಚೂರ್) - 1 ಚಮಚ
- ಸೋಂಪು ಪುಡಿ - ಅರ್ಧ ಚಮಚ
- ಇಂಗು - ಚಿಟಿಕೆ
- ಉಪ್ಪು - ಅರ್ಧ ಚಮಚ
- ಎಣ್ಣೆ - 2-3 ಚಮಚ
ಮಾಡುವ ವಿಧಾನ...
- ಮೊದಲು ಮೆಣಸಿನ ಕಾಯಿಗಳನ್ನು ತೊಳೆದು, ನಂತರ ಮಧ್ಯ ಭಾಗದಲ್ಲಿ ಕತ್ತರಿಸಿ ಬೀಜಗಳನ್ನು ತೆಗೆದಿಟ್ಟುಕೊಳ್ಳಬೇಕು.
- ನಂತರ ಪಾತ್ರಯೊಂದನ್ನು ತೆಗೆದುಕೊಂಡು ಅದಕ್ಕೆ, ಕಡಲೆಕಾಯಿ ಬೀಜದ ಪುಡಿ, ಅರಿಶಿನ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಇಂಗು, ಜೀರಿಗೆ ಪುಡಿ, ಸೋಂಪು ಪುಡಿ, ಉಪ್ಪು, ಗರಂ ಮಸಾಲಾ, ಆಮ್ ಚೂರ್ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಈ ಮಿಶ್ರಣವನ್ನು ಕತ್ತರಿಸಿಕೊಂಡ ಹಸಿಮೆಣಸಿನ ಕಾಯಿ ಮಧ್ಯೆ ತುಂಬಿಟ್ಟುಕೊಳ್ಳಬೇಕು.
- ಪ್ಯಾನ್'ಗೆ ಎಣ್ಣೆ ಹಾಕಿ ಅದು ಕಾದ ನಂತರ ಮಸಾಲೆ ತುಂಬಿದ ಮೆಣಸಿನ ಕಾಯಿಗಳನ್ನು ಹಾಕಬೇಕು. ನಂತರ ಉಳಿದ ಪುಡಿಯನ್ನು ಇದರ ಮೇಲೆ ಹಾಕಿ 5-10 ನಿಮಿಷ ಚೆನ್ನಾಗಿ ಫ್ರೈ ಮಾಡಿದರೆ, ರುಚಿಕರವಾದ ಮಿರ್ಚಿ ಫ್ರೈ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.