ಬೇಕಾಗುವ ಪದಾರ್ಥಗಳು....ಕಡಲೆ ಬೇಳೆ- 1 ಬಟ್ಟಲುನೀರು - 3 ಬಟ್ಟಲುಬೆಲ್ಲ- 1 ಬಟ್ಟಲು4- ಲವಂಗ ತುಪ್ಪ- 2 ಚಮಚದ್ರಾಕ್ಷಿ, ಗೋಡಂಬಿ- ಸ್ವಲ್ಪಏಲಕ್ಕಿ ಪುಡಿ - ಮುಕ್ಕಾಲು ಚಮಚಕೊಬ್ಬರಿ ಪುಡಿ - ಅರ್ಧ ಬಟ್ಟಲು.ಮಾಡುವ ವಿಧಾನ....ಮೊದಲಿಗೆ ಕುಕ್ಕರ್ ತೆಗೆದುಕೊಂಡು ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು, ಮೂರು ಬಟ್ಟಲು ನೀರು ಹಾಕಿ 3-5 ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಕಡಲೆಬೇಳೆಯಿಂದ ನೀರನ್ನು ಬಸಿದಿಟ್ಟುಕೊಳ್ಳಿ.ಬಳಿಕ ಒಲೆಯ ಮೇಲೆ ಬಾಣಲೆಯಿಟ್ಟು, ಅದಕ್ಕೆ ಬೆಂದ ಕಡಲೆಬೇಳೆ, ಬೆಲ್ಲ ಹಾಗೂ ಲವಂಗವನ್ನು ಹಾಕಿ. ಬೆಲ್ಲ ಕರಗುವವರೆಗೂ ಕೈಯಾಡಿಸಿ. ಮಿಶ್ರಣ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ನಂತರ ಚಿಕ್ಕ ಪ್ಯಾನ್'ಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ಇದನ್ನು ಬೆಲ್ಲ ಮಿಶ್ರಿತ ಕಡಲೆಬೇಳೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಬಳಿಕ ಏಲಕ್ಕಿ ಪುಡಿ ಹಾಗೂ ಕೊಬ್ಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಉಡುಪಿ ಶೈಲಿಯ ಹಯಗ್ರೀವ ಸವಿಯಲು ಸಿದ್ಧ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics