- ಚಕ್ಕೆ, ಲವಂಗ, ಏಲಕ್ಕಿ, ಪವಾವ್ ಎಲೆ- ಸ್ವಲ್ಪ
- ಈರುಳ್ಳಿ- 2
- ಹಸಿಮೆಣಸಿನ ಕಾಯಿ- 2
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 2
- ಅರಿಶಿಣ ಪುಡಿ - ಸ್ವಲ್ಪ
- ಅಚ್ಚ ಖಾರದ ಪುಡಿ- 2 ಚಮಚ
- ಬಟಾಣಿ- ಅರ್ಧ ಬಟ್ಟಲು
- ಆಲೂಗಟ್ಟೆ- ಬೇಯಿಸಿದ್ದು 3
- ಗರಂ ಮಸಲೆ ಪುಡಿ- ಅರ್ಧ ಚಮಚ
- ನಿಂಬೆಹಣ್ಣಿನ ರಸ- ಅರ್ಧ ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಪುದೀನಾ- ಸ್ವಲ್ಪ
- ಬಾಸುಮತಿ ಅಕ್ಕಿ- 1 ಬಟ್ಟಲು
- ಮೊದಲು ಕುಕ್ಕರ್'ನ್ನು ಒಲೆಯ ಮೇಲಿಟ್ಟು 2 ಚಮಚ ತುಪ್ಪ ಹಾಗೂ ಸ್ವಲ್ಪ ಎಣ್ಣೆ ಹಾಕಬೇಕು. ಕಾದ ನಂತರ ಚಕ್ಕೆ, ಲವಂಗ, ಪಲಾವ್ ಎಲೆ ಹಾಗೂ ಮಸಾಲೆ ಪದಾರ್ಥಗಳನ್ನು ಹಾಕಬೇಕು. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ, ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು, ಬಟಾಣಿ, ಆಲೂಗಡ್ಡೆ, ಗರಂ ಮಸಾಲೆ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕುಕ್ಕರ್ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿಕೊಂಡರೆ ರುಚಿಕರವಾದ ಆಲೂ ಮಟರ್ ಪಲಾವ್ ಸವಿಯಲು ಸಿದ್ಧ.