ಎಗ್ ಪೆಪ್ಪರ್ ಫ್ರೈ
ಸ್ಪೈಸಿ ಟೇಸ್ಟಿ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ ...
ಬೇಕಾಗುವ ಸಾಮಾಗ್ರಿಗಳು
1. ಮೊಟ್ಟೆ – 6
2. ಈರುಳ್ಳಿ-1
3. ಎಣ್ಣೆ – 2-3 ಚಮಚ
4. ಕಾಳು ಮೆಣಸು – 2 ಚಮಚ
5. ಉಪ್ಪು – ರುಚಿಗೆ ತಕ್ಕಷ್ಟು
5. ಕೊತ್ತಂಬರಿ ಸೊಪ್ಪು -ಸ್ವಲ್ಪ
7. ಅರಿಶಿಣ – ಚಿಟಿಕೆ
8. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಮಾಡುವ ವಿಧಾನ
- ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಒಂದು ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ.
- ಈಗ ಮೊಟ್ಟೆ ಬಿಡಿಸಿ ಒಂದು ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಕೊಳ್ಳಿ.
- ಬಳಿಕ ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದ ಮೇಲೆ ಕಟ್ ಮಾಡಿದ್ದ ಮೊಟ್ಟೆಯನ್ನು ಇಟ್ಟು 1 ನಿಮಿಷ ಬೇಯಿಸಿಕೊಳ್ಳಿ.
- ನಂತರ ಮೊಟ್ಟೆಯನ್ನು ಉಲ್ಟಾ ಮಾಡಿ ಸ್ವಲ್ಪ ಬ್ರೌನ್ ಬಣ್ಣ ಬರುವರೆಗೆ ಫ್ರೈ ಮಾಡಿ, ಮೊಟ್ಟೆಯನ್ನು ಒಂದು ಪ್ಲೇಟ್ ಗ ಎತ್ತಿಟ್ಟುಕೊಳ್ಳಿ
- ಈಗ ಅದೇ ಬಾಣಲೆಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ, ಅದಕ್ಕೆ ಉಪ್ಪು, ಚಿಟಿಕೆ ಅರಿಶಿಣ ಉದುರುಸಿ.
- ನಂತರ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
- ಕಾಳು ಮೆಣಸಿನ ಪುಡಿ ಹಾಕಿ ಕಲೆಸಿರಿ, ಈಗ ಅದಕ್ಕೆ ಫ್ರೈ ಮಾಡಿಟ್ಟುಕೊಂಡ ಮೊಟ್ಟೆ ಹಾಕಿ ಎರಡು ಕಡೆ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ
- ನಂತರ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ಪೈಸಿ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.