ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬೆಂಡೆಕಾಯಿ ಕುರ್ಕುರೆ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
ಬೆಂಡೆಕಾಯಿ- ಅರ್ಧ ಕೆಜಿ
ಅಚ್ಛ ಖಾರದ ಪುಡಿ- ಅರ್ಧ ಚಮಚ
ಅರಿಶಿಣ ಪುಡಿ- ಅರ್ಧ ಚಮಚ
ದನಿಯಾ ಪುಡಿ - ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ- ಕಾಲು ಚಮಚ
ಚಾಟ್ ಮಸಾಲಾ- ಅರ್ಧ ಚಮಚ
ನಿಂಬೆ ರಸ- ಸ್ವಲ್ಪ
ಕಡಲೆಹಿಟ್ಟು- 1/4 ಬಟ್ಟಲು
ಅಕ್ಕಿ ಹಿಟ್ಟು- 1/4 ಬಟ್ಟಲು
ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
ಮೊದಲು ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಮಧ್ಯೆ ಕತ್ತರಿಸಿ ಬೀಜ ತೆಗೆದು ಒಂದು ಬೆಂಡೆಕಾಯಿಯನ್ನು ನಾಲ್ಕು ಭಾಗ ಮಾಡಿಟ್ಟುಕೊಳ್ಳಬೇಕು.
ನಂತರ ಕತ್ತರಿಸಿಕೊಂಡ ಬೆಂಡೆಕಾಯಿಗೆ ಅಚ್ಛ ಖಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ಎಣ್ಣೆ, ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ನೆನೆಯಲು ಬಿಡಬೇಕು.
ನಂತರ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆಯಲ್ಲಿ ಕೆಂಪಗೆ ಕರಿದರೆ ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬೆಂಡೆಕಾಯಿ ಕುರ್ಕುರೆ ಸವಿಯಲು ಸಿದ್ಧ.