ಕುಷ್ಕಾ ರೈಸ್
ರುಚಿಕರವಾದ ಕುಷ್ಕಾ ರೈಸ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಅಕ್ಕಿ- 1 ಬಟ್ಟಲು
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಅಚ್ಛ ಖಾರದ ಪುಡಿ- 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ-ಸ್ವಲ್ಪ
- ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಸೋಂಪು- ಸ್ವಲ್ಪ
- ಈರುಳ್ಳಿ - 1 (ಉದ್ದಕ್ಕೆ ಹೆಚ್ಚಿಕೊಂಡಿದ್ದು)
- ಗರಂ ಮಸಾಲೆ ಪುಡಿ - ಅರ್ಧ ಚಮಚ
- ಹಸಿಮೆಣಸಿನಕಾಯಿ-2
- ಟೊಮೆಟೋ-2 (ಉದ್ದಕ್ಕೆ ಹೆಚ್ಚಿಕೊಂಡಿದ್ದು)
- ಮೊಸರು-ಅರ್ಧ ಬಟ್ಟಲು
- ಪುದೀನಾ, ಕೊತ್ತಂಬರಿ ಸೊಪ್ಪು- ಸ್ವಲ್ಪ
- ಅರಿಶಿಣದ ಪುಡಿ- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಕಾದ ಬಳಿಕ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ ಎಲ್ಲವನ್ನು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅರಿಶಿಣದ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಎಲ್ಲವನ್ನೂ ಹಾಕಿ 5 ನಿಮಿಷ ಕುದಿಯಲು ಬಿಟ್ಟು, ನೆನೆಸಿಟ್ಟುಕೊಂಡ ಅಕ್ಕಿಯನ್ನೂ ಹಾಕಿ 5 ನಿಮಿಷ ಬಿಡಬೇಕು.
- ಬಳಿಕೆ ಅಳತೆಯಷ್ಟು 2 ಬಟ್ಟಲು ನೀರು ಹಾಕಿ ಕುಕ್ಕುರ್ ಮುಚ್ಚಳವನ್ನು ಮುಚ್ಚಿ 1-2 ಕೂಗು ಕೂಗಿಸಿಕೊಂಡರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.