ಆರೆಂಜ್ ಫಿರ್ನಿ
ರುಚಿಕರವಾದ ಆರೆಂಜ್ ಫಿರ್ನಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಬಾಸುಮತಿ ಅಕ್ಕಿ- 1/2 ಬಟ್ಟಲು
- ಆರೆಂಜ್ -2
- ಕಾಯಿಸಿದ ಹಾಲು- 1 ಲೀಟರ್
- ಸಕ್ಕರೆ- 3/4 ಬಟ್ಟಲು
- ಏಲಕ್ಕಿ ಪುಡಿ- 1 ಚಮಚ
- ಕೇಸರಿ ದಳ- 4-5
- ಆರೆಂಜ್ ಸಿಪ್ಪೆ- ಸ್ವಲ್ಪ
- ಪಿಸ್ತಾ- ಸ್ವಲ್ಪ
- ಬಾದಾಮಿ- 4
ಮಾಡುವ ವಿಧಾನ...
- ಅಕ್ಕಿಯನ್ನು ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನೆಸಬೇಕು. ನಂತರ ಮಿಕ್ಸಿ ಜಾರ್ ಗೆ ಹಾಕಿ ನೀರು ಹಾಕದಂತೆ ಅಕ್ಕಿಯನ್ನು ರುಬ್ಬಿಕೊಳ್ಳಬೇಕು. ಅಕ್ಕಿಯನ್ನು ಪುಡಿ ಮಾಡಿಕೊಳ್ಳಬೇಕು.
- ಆರೆಂಜ್ ಗಳನ್ನು ಕತ್ತರಿಸಿಕೊಂಡು ರಸ ತೆಗೆಯಬೇಕು.
- ಒಲೆಯ ಮೇಲೆ ಬಾಣಲೆಇಟ್ಟು, ಹಾಲನ್ನು ಕಾಯಲು ಬಿಡಬೇಕು. ಹಾಲು ಕಾದ ನಂತರ ಪುಡಿ ಮಾಡಿಕೊಂಡ ಅಕ್ಕಿಯನ್ನು ಹಾಕಿ ಗಂಟಾಗದಂತೆ ಕೈಯಾಡಿಸಬೇಕು.
- ಅಕ್ಕಿ ಬಂದ ಬಳಿಕ ಸಕ್ಕರೆ, ಏಲಕ್ಕಿ ಪುಡಿ, ಕೇಸರಿ ದಳ, ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಫಿರ್ನಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
- ನಂತರ ಆರೆಂಜ್ ತೆಗೆದುಕೊಂಡು ಸಿಪ್ಪೆಯನ್ನು ತುರಿದು ಸ್ವಲ್ಪ ಹಾಕಬೇಕು. ನಂತರ ಆರೆಂಜ್ ರಸ, ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾ, ಬಾದಾಮಿಯನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾಗ ಆರೆಂಜ್ ಫಿರ್ನಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.