- ಬಾಸುಮತಿ ಅಕ್ಕಿ- 1 ಬಟ್ಟಲು
- ಜೀರಿಗೆ- 1 ಚಮಚ
- ನೀರು- 2 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ತುಪ್ಪ- 2 ಚಮಚ
- ಹಸಿಮೆಣಸಿನ ಕಾಯಿ- 2-3
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಒಲೆಯ ಮೇಲೆ ಪಾತ್ರವನ್ನು ಇಟ್ಟು ಅದಕ್ಕೆ 2 ಬಟ್ಟಲು ನೀರು ಹಾಗೂ ಉಪ್ಪು ಹಾಕಿ ಕುದಿಯಲು ಬಿಡಬೇಕು. ನಂತರ ಬಾಸುಮತಿ ಅಕ್ಕಿಯನ್ನು ಹಾಕಿ ಉದುರು ಉದುರು ಇರುವಂತೆ ಅನ್ನವನ್ನು ತಯಾರು ಮಾಡಿಕೊಳ್ಳಬೇಕು.
- ನಂತರ ಒಲೆಯ ಮೇಲ ಬಾಣಲೆ ಇಟ್ಟು, ಅದಕ್ಕೆ 1 ಚಮಚ ತುಪ್ಪ ಹಾಕಿ, ಕಾದ ನಂತರ ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಹಸಿಮೆಣಸಿನ ಕಾಯಿ ಹಾಕಿ ಹುರಿದುಕೊಂಡು, ಮಾಡಿಟ್ಟುಕೊಂಡ ಅನ್ನ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಂಡರೆ ರುಚಿಕರವಾದ ಜೀರಾ ರೈಸ್ ಸವಿಯಲು ಸಿದ್ಧ.