ತಂದೂರಿ ಮಸಾಲಾ ಪುಡಿ
ತಂದೂರಿ ಮಸಾಲಾ ಪುಡಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ದನಿಯಾ- 1/4 ಬಟ್ಟಲು
- ಜೀರಿಗೆ- 1 ಚಮಚ
- ಕಾಳುಮೆಣಸು- 2 ಚಮಚ
- ಹಸಿರು ಏಲಕ್ಕಿ- 10
- ಕಪ್ಪು ಏಲಕ್ಕಿ- 2
- ಚಕ್ಕೆ- 2
- ಲವಂಗ - 1 ಚಮಚ
- ಜಾಯಿಪತ್ರೆ- 2
- ಕಾಶ್ಮೀರಿ ರೆಡ್ ಚಿಲ್ಲಿ- 15
- ಕಸೂರಿ ಮೇಥಿ- 2 ಚಮಚ
- ಶುಂಠಿ ಪುಡಿ- 1 ಚಮಚ
ಮಾಡುವ ವಿಧಾನ...
- ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಅದಕ್ಕೆ ದನಿಯಾ ಹಾಕಿ 2 ನಿಮಿಷ ಹುರಿದುಕೊಳ್ಳಬೇಕು.
- ನಂತರ ಜೀರಿಗೆ, ಮೆಣಸು, ಏಲಕ್ಕಿ, ಚಕ್ಕೆ, ಲವಂಗ, ಜಾಯಿಕಾಯಿ, ದೊಡ್ಡಪತ್ರೆ, ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ಬಳಿಕ ಮೆಣಿಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಂಡು, ಕೊನೆಯಲ್ಲಿ ಕಸೂರಿ ಮೇಥಿ ಹಾಕಿ ಹುರಿದುಕೊಳ್ಳಿ.
- ತಣ್ಣಗಾದ ಬಳಿಕ ಮಿಕ್ಸಿ ಜಾರ್'ಗೆ ಶುಂಠಿ ಪುಡಿ ಹಾಗೂ ಎಲ್ಲವನ್ನೂ ಹಾಕಿ ಪುಡಿ ಮಾಡಿಕೊಂಡರೆ ತಂದೂರಿ ಮಸಾಲ ಪುಡಿ ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.