- ಹುರಿಗಡಲೆ ಪುಡಿ- ಅರ್ಧಬಟ್ಟಲು
- ಕೇಸರಿ- 7-10 ದಳ
- ಹಾಲು- ಒಂದು ಸಣ್ಣ ಬಟ್ಟಲು (ಕಾಯಿಸಿ ಆರಿಸಿದ್ದು)
- ಗಟ್ಟಿ ತುಪ್ಪ- 1-2 ಚಮಚ
- ಸಕ್ಕರೆ ಪುಡಿ- 1 ಬಟ್ಟಲು
- ಏಲಕ್ಕಿ ಪುಡಿ-ಅರ್ಧ ಚಮಚ
- ಮೊದಲಿಗೆ ಸಣ್ಣ ಪಾತ್ರೆಗೆ ಗಟ್ಟಿ ತುಪ್ಪ ಹಾಗೂ ಬಟ್ಟಲು ಸಕ್ಕರೆಯನ್ನು ಹಾಕಿ ಚೆನ್ನಾಗಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು.
- ನಂತರ ಇದಕ್ಕೆ ಹುರಿಗಡಲೆ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಕಾದ ಹಾಲಿಗೆ 7-10 ದಳ ಕೇಸರಿ ದಳಗಳನ್ನು ಹಾಕಿಡಬೇಕು.
- ಬಳಿಕ ಕೇಸರಿದಳದಲ್ಲಿ ನೆನೆದ ಹಾಲನ್ನು ಸ್ವಲ್ಪ ಸ್ವಲ್ಪವೇ ಹುರಿಗಡಲೆಗೆ ಹಾಕಿ ಮೃದವಾಗಿ ಹಿಟ್ಟನ್ನು ಮಾಡಿಕೊಳ್ಳಬೇಕು. ನಂತರ ಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಹಾಕಿ ಸಿಲಿಂಡರ್ ಆಕಾರಕ್ಕೆ ಮಾಡಿಕೊಂಡು, ಡ್ರೈಫ್ರೂಟ್ಸ್ ನಿಂದ ಅಲಂಕರಿಸಿದರೆ ರುಚಿಕರವಾದ ಹುರಿಗಡಲೆ ಪೇಡಾ ಸವಿಯಲು ಸಿದ್ಧ.