ಬಿಸ್ಕೆಟ್ ಬರ್ಫಿ
ರುಚಿಕರವಾದ ಬಿಸ್ಕೆಟ್ ಬರ್ಫಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಪಾರ್ಲೆಜಿ ಬಿಸ್ಕೆಟ್ - 3 ಪ್ಯಾಕೆಟ್
- ಸಕ್ಕರೆ - ಅರ್ಧ ಬಟ್ಟಲು
- ತುಪ್ಪ- ಅರ್ಧ ಕೆಜಿ
- ಹಾಲಿನ ಪುಡಿ- 1 ಚಮಚ
- ಹಾಲು- ಅರ್ಧ ಬಟ್ಟಲು
- ಡ್ರೈಫ್ರೂಟ್ಸ್- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಕಾಯಲು ಬಿಡಿ. ಕಾದ ತುಪ್ಪಕ್ಕೆ ಪಾರ್ಲೆಜಿ ಬಿಸ್ಕೆಟ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.
- ಬಳಿಕ ತಣ್ಣಗಾಗಲು ಬಿಟ್ಟು ಮಕ್ಸಿ ಜಾರ್'ಗೆ ತುಪ್ಪದಲ್ಲಿ ಕರಿದ ಬಿಸ್ಕೆಟ್ ಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ
- ಮತ್ತೊಂದೆಡೆ ಹಾಲಿನ ಪುಡಿಗೆ ಹಾಕಿ ಹಾಲು ಹಾಕಿ ಮಿಶ್ರಣ ಮಾಡಿಕೊಳ್ಳಿ. ಮತ್ತೊಂದು ಬಾಣೆಲೆ ಇಟ್ಟು, ಅದಕ್ಕೆ ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ.
- ಬಳಿಕ ಬಿಸ್ಕೆಟ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 10-15 ನಿಮಿಷ ಕೈಯಾಡಿಸಿ.
- ಬಳಿಕ ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.