- ಗೋಧಿ ಹಿಟ್ಟು: 200 ಗ್ರಾಂ
- ಕಡಲೆ ಹಿಟ್ಟು: 100 ಗ್ರಾಂ
- ಗಟ್ಟಿ ಮೊಸರು: 50 ಗ್ರಾಂ
- ಟೊಮೆಟೊ: 3
- ಮೊಳಕೆ ಹೆಸರು ಕಾಳು: ಒಂದು ಹಿಡಿ
- ಮೆಂತ್ಯ ಎಲೆಗಳು: 2 ಹಿಡಿ
- ಶುಂಠಿ: ಒಂದು ಸಣ್ಣ ತುಂಡು
- ಮೆಣಸು, ಜೀರಿಗೆ: ತಲಾ 1 ಟೀಸ್ಪೂನ್
- ಮೆಣಸಿನ ಪುಡಿ: 1 ಟೀಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಬೇಯಿಸಲು ಎಣ್ಣೆ
- ಗೋಧಿ ಹಿಟ್ಟು ಮತ್ತು ಕಡಲೆ ಹಿಟ್ಟಿನೊಂದಿಗೆ ದೋಸೆ ಹಿಟ್ಟನ್ನು ತಯಾರಿಸಿ.
- ಕಾಳುಮೆಣಸು, ಜೀರಿಗೆಯನ್ನು ಪುಡಿ ಮಾಡಿಕೊಂಡು ಸ್ವಲ್ಪ ಉಪ್ಪಿನೊಂದಿಗೆ ಹಿಟ್ಟಿಗೆ ಸೇರಿಸಿ.
- ಮೆಂತ್ಯ ಎಲೆಗಳು ಮತ್ತು ಶುಂಠಿಯನ್ನು ಕತ್ತರಿಸಿ. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
- ಒಂದು ಪಾತ್ರೆಯಲ್ಲಿ, ಕತ್ತರಿಸಿದ ಟೊಮೆಟೊ, ಮೆಂತ್ಯ, ಶುಂಠಿ, ಮತ್ತು ಮೊಳಕೆ ಹೆಸರು ಕಾಳು, ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
- ತವಾವನ್ನು ಬಿಸಿ ಮಾಡಿ. ಅದರ ಮೇಲೆ ಎರಡು ಸಣ್ಣ ಕಪ್ ಹಿಟ್ಟನ್ನು ಸುರಿಯಿರಿ ಮತ್ತು ದಪ್ಪದಾದ ದೋಸೆ ಮಾಡಿ.
- ಅದರ ಮೇಲೆ ಒಂದು ಕಪ್ ಟೊಮೆಟೊ ಮಿಶ್ರಣವನ್ನು ಹರಡಿ. ಎಣ್ಣೆಯನ್ನು ಹಾಕಿ ಮತ್ತು ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ.
- ನಂತರ ತವಾ ಮೇಲಿಂದ ತೆಗೆದು ಚಟ್ನಿ, ಸಾಗು ಅಥವಾ ಮತ್ತಿತರ ಸೂಕ್ತವಾದ ಭಕ್ಷ್ಯದೊಂದಿಗೆ ಬಿಸಿಬಿಯಾಗಿ ತಿನ್ನಲು ಕೊಡಿ.
ಬೇಕಾಗುವ ಪದಾರ್ಥಗಳುಟೊಮೆಟೊ ಮಿಶ್ರಣ- ಅಖಿಲಾ ತ್ಯಾಗರಾಜನ್, ಬೆಂಗಳೂರು.