ಬೇಕಾಗುವ ಪದಾರ್ಥಗಳು....ಎಲೆಕೋಸು – ಒಂದೂವರೆ ಬಟ್ಟಲು (ಸಣ್ಣಗೆ ಕತ್ತರಿಸಿದ್ದು)ಕ್ಯಾರೆಟ್ – 1 (ತುರಿದದ್ದು)ಕ್ಯಾಪ್ಸಿಕಂ – ಕಾಲು ಭಾಗ (ಸಣ್ಣಗೆ ಹೆಚ್ಚಿದ್ದು)ಸ್ಪ್ರಿಂಗ್ ಆನಿಯನ್ – 2 ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)ಈರುಳ್ಳಿ – ಅರ್ಧ (ಸಣ್ಣಗೆ ಹೆಚ್ಚಿದ್ದು)ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚವಿನೆಗರ್ – 1 ಚಮಚಸೋಯಾ ಸಾಸ್ – 1 ಚಮಚಚಿಲ್ಲಿ ಸಾಸ್ – 1 ಚಮಚಉಪ್ಪು – ರುಚಿಗೆ ತಕ್ಕಷ್ಟುಮೈದಾ – ಅರ್ಧ ಬಟ್ಟಲುಕಾರ್ನ್ ಫ್ಲೋರ್ – 2 ಚಮಚಫುಡ್ ಕಲರ (ಕೆಂಪು)– ಅರ್ಧ ಚಮಚಎಣ್ಣೆ – ಹುರಿಯಲು.ಮಾಡುವ ವಿಧಾನ....ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಸ್ಪ್ರಿಂಗ್ ಆನಿಯನ್, ಮತ್ತು ಈರುಳ್ಳಿ ಹಾಕಿಕೊಳ್ಳಿ.ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.ಬಳಿಕ ಮೈದಾ, ಕಾರ್ನ್ ಫ್ಲೋರ್, ಕೆಂಪು ಆಹಾರ ಬಣ್ಣವನ್ನು ಸೇರಿಸಿ.ಮಿಶ್ರಣ ಹಿಟ್ಟಿನಂತಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.ಈಗ ಕೈಗೆ ಎಣ್ಣೆ ಸವರಿ, ಒಂದೊಂದು ಚಮಚ ಮಿಶ್ರಣವನ್ನು ತೆಗೆದುಕೊಂಡು, ಪಕೋಡಾ ರೀತಿಯಲ್ಲಿ ಉಂಡೆ ಮಾಡಿಕೊಳ್ಳಿ.ನಂತರ ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಪಕೋಡಾಗಳನ್ನು ಡೀಪ್ ಫ್ರೈ ಮಾಡಿ. ಪಕೋಡಾ ಗರಿಗರಿಯಾಗುವವರೆಗೆ ಹುರಿದುಕೊಂಡರೆ ರುಚಿಕರವಾದ ಚೈನೀಸ್ ಪಕೋಡಾ ಸವಿಯಲು ಸಿದ್ಧ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics