ಕ್ಯಾರೆಟ್ ಖೀರ್
ರುಚಿಕರವಾದ ಕ್ಯಾರೆಟ್ ಖೀರ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ತುಪ್ಪ- 1 ಚಮಚ
- ಗೋಂಡಬಿ, ದ್ರಾಕ್ಷಿ- ಸ್ವಲ್ಪ
- ಕ್ಯಾರೆಟ್- ತುರಿದದ್ದು 1 ಬಟ್ಟಲು
- ಹಾಲು- ನಾಲ್ಕು ಬಟ್ಟಲು
- ಕೇಸರಿ- ಸ್ವಲ್ಪ
- ಸಕ್ಕರೆ- 2 ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
- ಪಿಸ್ತಾ- ಸ್ವಲ್ಪ
- ಹಾಲಿನ ಪುಡಿ- ಅರ್ಧ ಬಟ್ಟಲು
ಮಾಡುವ ವಿಧಾನ...
- ಒಲೆಯ ಮೇಲೆ ಬಾಣಲೆ ಇಟ್ಟು, ತುಪ್ಪ ಹಾಕಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಕೆಂಪಗೆ ಹುರಿದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ತುರಿದ ಕ್ಯಾರೆಟ್ ನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ.
- ಬಣ್ಣ ಬದಲಾದ ಮೇಲೆ 2 ಹಾಲು ಹಾಗೂ ಕೇಸರಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ದಪ್ಪವಾಗುವವರೆಗೆ ಕುದಿಸಿಕೊಳ್ಳಿ.
- ಮತ್ತೊಂದು ಪಾತ್ರೆಯಲ್ಲಿ 2 ಬಟ್ಟಲು ಹಾಲು ಹಾಗೂ ಹಾಲಿನ ಪುಡಿ ಮಿಶ್ರಣ ಮಾಡಿ. ಈ ಮಿಶ್ರಣ ದಪ್ಪವಾದ ಮೇಲೆ ಕ್ಯಾರೆಟ್ ಹಾಲಿನ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ ಹಾಕಿ 5 ನಿಮಿಷ ಕುದಿಸಿದರೆ ಕ್ಯಾರೆಟ್ ಖೀರ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.