ಮೊದಲಿಗೆ ಟೊಮೆಟೊವನ್ನು ಮಿಕ್ಸಿ ಜಾರ್‌ಗೆ ಹಾಕಿ ನೀರು ಹಾಕದಂತೆ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ದೊಡ್ಡ ಬಟ್ಟಲಿನಲ್ಲಿ ಜರಡಿ ಹಿಡಿದು ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಮೆಣಸಿನ ಪುಡಿ, ಇಂಗು ಮತ್ತು ಉಪ್ಪು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ಬೆಣ್ಣೆ ಹಾಗೂ ಓಂಕಾಳು ಸೇರಿಸಿ ಮಿಶ್ರಣ ಮಾಡಿ.
ಟೊಮೆಟೊ ಪ್ಯೂರಿಯಲ್ಲಿ ಬೀಜ ಹಾಗೂ ಸಿಪ್ಪೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೋಸಿ, ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಚಕ್ಕುಲಿ ಹಿಟ್ಟಿನ ಹದದಂತೆ ಮೃದುವಾದ ಹಿಟ್ಟನ್ನು ತಯಾರಿಸಿ.
ನಂತರ ಸಣ್ಣ ಸಣ್ಣ ರಂಧ್ರಗಳಿರುವ ಚಕ್ಕುಲಿ ಮೇಕರ್ ತೆಗೆದುಕೊಂಡು, ಒಳ ಭಾಗದಲ್ಲಿ ಸ್ವಲ್ಪ ಎಣ್ಣೆ ಹಚ್ಚಿ, ಚೆಂಡಿನ ಗಾತ್ರದ ಮಿಶ್ರಣವನ್ನು ಚಕ್ಕುಲಿ ಮೇಕರ್ ಒಳಗೆ ಹಾಕಿ ತಯಾರಿಸಿಡಿ.
ಕಾದ ಎಣ್ಣೆಯಲ್ಲಿ ಸೇವ್ ಅನ್ನು ಒತ್ತಿ, ಒಂದು ಸುತ್ತು ವೃತ್ತವಾಗಿ ಹರಡಿ. ಈಗ ಸೇವ್ ಅನ್ನು ಗರಿಗರಿಯಾಗಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಸೇವ್ ಅನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹಾಕಿ. ಇದೀಗ ರುಚಿಕರವಾದ ಟೊಮೆಟೊ ಸೇವ್ ಸವಿಯಲು ಸಿದ್ಧ.