ಕ್ಯಾರೆಟ್ ಬರ್ಫಿ
ರುಚಿಕರವಾದ ಕ್ಯಾರೆಟ್ ಬರ್ಫಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ತುರಿದ ತೆಂಗಿನಕಾಯಿ – 1 ಬಟ್ಟಲು
- ತುರಿದ ಕ್ಯಾರೆಟ್ – 1 ಬಟ್ಟಲು
- ಸಕ್ಕರೆ – ಒಂದೂವರೆ ಬಟ್ಟಲು
- ತುಪ್ಪ – 2-3 ಚಮಚ
- ಏಲಕ್ಕಿ ಪುಡಿ – 1 ಚಮಚ
- ದ್ರಾಕ್ಷಿ, ಗೋಡಂಬಿ- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಹಾಕಿ. ಬಿಸಿ ಮಾಡಿಕೊಳ್ಳಿ. ನಂತರ ತುರಿದ ಕ್ಯಾರೆಟ್ ಹಾಗೂ ತೆಂಗಿನ ತುರಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷ ಹುರಿಯಿರಿ. ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ಸಕ್ಕರೆ ಕರಗಲು ಪ್ರಾರಂಭವಾದ ಬಳಿಕ ಉರಿಯನ್ನು ಮಧ್ಯಮದಲ್ಲಿಟ್ಟು, ಕೈಯಾಡಿಸುತ್ತಿರಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ಬಳಿಕ ಗುಳ್ಳೆಗಳು ಕಾಣಿಸಿಕೊಂಡು ದಪ್ಪವಾಗಲು ಪ್ರಾರಂಭವಾಗುತ್ತದೆ. ಈಗ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.
- ಮಿಶ್ರಣ ಮುದ್ದೆಯಾಗಿ, ಪ್ಯಾನ್ನಿಂದ ಬೇರ್ಪಡಲು ಪ್ರಾರಂಭವಾಗುತ್ತಿದ್ದಂತೆ ತಕ್ಷಣ ಅದನ್ನು ಕೆಳಗಿಳಿಸಿ. ಈಗ ತುಪ್ಪ ಸವರಿದ ತಟ್ಟೆಯ ಮೇಲೆ ಮಿಶ್ರಣವನ್ನು ಸಮಾನವಾಗಿ ಹರಡಿ.
- ಬಳಿಕ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿ. ಬೆಚ್ಚಗಿರುವಾಗಲೇ ಚಾಕು ಸಹಾಯದಿಂದ ತುಂಡುಗಳಾಗಿ ಕತ್ತರಿಸಿ. ತಣ್ಣಗಾಗಲು ಬಿಡಿ. ಇದೀಗ ರುಚಿಕರವಾದ ಕ್ಯಾರೆಟ್ ಬರ್ಫಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.