ಎಲೆಕೋಸು ಪಕೋಡಾ
ರುಚಿಕರವಾದ ಎಲೆಕೋಸು ಪಕೋಡಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಎಲೆಕೋಸು- 1 ಸಣ್ಣ ಗಾತ್ರದ್ದು (ಸಣ್ಣಗೆ ಕತ್ತರಿಸಿದ್ದು)
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಸ್ವಲ್ಪ
- ಅಚ್ಚ ಖಾರದ ಪುಡಿ- 1 ಚಮಚ
- ಜೀರಿಗೆ ಪುಡಿ- ಕಾಲು ಚಮಚ
- ಗರಂ ಮಸಾಲಾ ಪುಡಿ- ಅರ್ಧ ಚಮಚ
- ಕಡಲೆಹಿಟ್ಟು- ಒಂದು ಬಟ್ಟಲು
- ಅಕ್ಕಿ ಹಿಟ್ಟು- ಅರ್ಧ ಬಟ್ಟಲು
- ಜೋಳದ ಹಿಟ್ಟು- ಕಾಲು ಬಟ್ಟಲು
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
- ಪಾತ್ರೆಯೊಂದಕ್ಕೆ ಮೊದಲಿಗೆ ಸಣ್ಣಗೆ ಹಾಗೂ ಉದ್ದಕ್ಕೆ ಹೆಚ್ಚಿಕೊಂಡ ಎಲೆಕೋಸನ್ನು ಹಾಕಿಕೊಳ್ಳಿ. ಬಳಿಕ ಉಪ್ಪು, ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಪ್ಯಾನ್ ವೊಂದಕ್ಕೆ 5-6 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ಈ ಎಣ್ಣೆಯನ್ನು ಮಸಾಲೆ ಮಿಶ್ರಿತ ಎಲೆಕೋಸಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಿಸಿ ಎಣ್ಣೆ ಹಾಕಿದಾಗ ಎಲೆಕೋಸು ಮೆತ್ತಗಾಗಿ ಉಂಡೆ ಮಾಡಲು ಸಹಾಯ ಮಾಡುತ್ತದೆ.
- ನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಮಿಶ್ರಣವನ್ನು ಉಂಡೆ ಅಥವಾ ಬೇಕಾದ ಆಕಾರ ಮಾಡಿಕೊಂಡು ಎಣ್ಣೆಗೆ ಬಿಟ್ಟು, ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಎಲೆಕೋಸು ಪಕೋಡಾ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.