- ಹುರಿಗಡಲೆ- ಒಂದು ಬಟ್ಟಲು
- ಅಕ್ಕಿ ಹಿಟ್ಟು- ನಾಲ್ಕು ಬಟ್ಟಲು
- ಇಂಗು- ಸ್ವಲ್ಪ
- ಬಿಳಿ ಎಳ್ಳು- 2 ಚಮಚ
- ಉಪ್ಪು- ರುಚಗೆ ತಕ್ಕಷ್ಟು
- ಅಚ್ಚ ಖಾರದ ಪುಡಿ- 1 ಚಮಚ
- ಬೆಣ್ಣೆ- ನಾಲ್ಕು ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಮೊದಲಿಗೆ ಮಿಕ್ಸಿ ಜಾರ್'ಗೆ ಹುರಿಗಡಲೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
- ನಂತರ ಹುರಿಗಡಲೆ ಹಾಗೂ ಅಕ್ಕಿ ಹಿಟ್ಟು ಉಪ್ಪು, ಖಾರದ ಪುಡಿ, ಇಂಗು, ಬಿಳಿ ಎಳ್ಳು ಹಾಕಿ ಚೆನ್ನಾಗಿ ಮುಶ್ರಣ ಮಾಡಿ. ನಂತರ ಕಾಯಿಸಿದ ಬೆಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.
- ಅಗತ್ಯವಿದ್ದಷ್ಟು ನೀರು ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಅಂಚಿಗೆ ಎಣ್ಣೆ ಸವರಿ ಅದರಲ್ಲಿ ಹಿಟ್ಟನ್ನು ತುಂಬಿಸಿ. ಕಾದಿರುವ ಎಣ್ಣೆಯಲ್ಲಿ ಚಕ್ಕುಲಿಯನ್ನು ಒತ್ತಿ.
- ಎರಡೂ ಬದಿ ಕಂದು ಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೂ ಕರಿಯಿರಿ. ಬೇಕಾದರೆ ಪೇಪರ್ ಮೇಲೆ ಚಿಕ್ಕ ಚಿಕ್ಕ ಚಕ್ಕುಲಿ ಒತ್ತಿಟ್ಟುಕೊಂಡು ನಂತರ ಬಿಸಿಯಾದ ಎಣ್ಣೆಯಲ್ಲಿ ಕರಿದು ತೆಗೆಯಬಹುದು. ಇದು ತಣ್ಣಗಾದ ಮೇಲೆ ಡಬ್ಬದಲ್ಲಿ ತೆಗೆದಿಡಿ.