- ತೆಂಗಿನ ಕಾಯಿ ತುರಿ - ಒಂದು ಬಟ್ಟಲು
- ಬೆಲ್ಲ- ಒಂದು ಬಟ್ಟಲು
- ಏಲಕ್ಕಿ ಪುಡಿ- ಅರ್ಧ ಚಮಚ
- ತುಪ್ಪ- 2 ಚಮಚ
- ಕೋವಾ- ಸ್ವಲ್ಪ
- ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಎರಡು ಚಮಚ ತುಪ್ಪ ಹಾಕಿ ಕಾದ ನಂತರ ತೆಂಗಿನ ತುರಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
- ಮತ್ತೊಂದು ಪಾತ್ರೆಗೆ ಸ್ವಲ್ಪ ನೀರು ಹಾಗೂ ಬೆಲ್ಲವನ್ನು ಹಾಕಿ ಬೆಲ್ಲವನ್ನು ಕರಗಿಸಿಕೊಳ್ಳಿ. ಕರಗಿದ ಬೆಲ್ಲವನ್ನು ಶೋಧಿಸಿಕೊಂಡು ತೆಂಗಿನ ತುರಿಗೆ ಹಾಕಿ ತಳಹತ್ತದಂತೆ ಕೈಯಾಡಿಸುತ್ತಿರಿ. ಪಾಕ ಗಟ್ಟಿಯಾಗುತ್ತಿದ್ದಂತೆಯ ಇದಕ್ಕೆ ಏಲಕ್ಕಿ ಪುಡಿ ಹಾಗೂ ಕೋವಾ ಹಾಕಿ.
- ತಟ್ಟೆಯೊಂದಕ್ಕೆ ತುಪ್ಪ ಸವರಿ, ಈ ಪಾಕವನ್ನು ಸುರಿದು ಬೇಕಾದ ಆಕಾರಕ್ಕೆ ಕತ್ತರಿಸಿ, ಆರಲು ಬಿಟ್ಟರೆ ರುಚಿಕರವಾದ ತೆಂಗಿನಕಾಯಿ ಬೆಲ್ಲದ ಬರ್ಫಿ ಸವಿಯಲು ಸಿದ್ಧ.