ಆಲೂ ರವಾ ಫ್ರೈ
ರುಚಿಕರವಾದ ಆಲೂ ರವಾ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ – 2-3
- ಎಣ್ಣೆ – ಅಗತ್ಯವಿದ್ದಷ್ಟು
- ಅಚ್ಚ ಖಾರದ ಪುಡಿ - 2-3 ಚಮಚ
- ಅರಿಶಿಣದ ಪುಡಿ- ಸ್ವಲ್ಪ
- ಇಂಗು- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ರವೆ- 1 ಬಟ್ಟಲು
- ಕಾಳು ಮೆಣಸಿನ ಪುಡಿ- ಅರ್ಧ ಚಮಚ
ಮಾಡುವ ವಿಧಾನ...
- ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು, ತೆಳುವಾದ ಸ್ಲೈಸ್ಗಳಾಗಿ ಕತ್ತರಿಸಿ, ನೀರಿನಲ್ಲಿ ನೆನೆಸಿ.
- ಬಳಿಕ ಒಂದು ಪಾತ್ರೆಯಲ್ಲಿ ಉಪ್ಪು, 1 ಚಮಚ ಖಾರದ ಪುಡಿ, ಅರಿಶಿಣದ ಪುಡಿ, ಇಂದು ಹಾಗೂ ಸ್ವಲ್ಪ ನೀರು ಸೇರಿದ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.
- ನಂತರ ನೆನೆಸಿಟ್ಟ ಆಲೂಗಡ್ಡೆ ಪೀಸ್ ಗಳನ್ನು ತೆಗೆದು ಮಸಾಲೆ ಹಚ್ಚಿ, 15 ನಿಮಿಷ ಪಕ್ಕಕ್ಕಿಡಿ.
- ಮತ್ತೊಂದು ಪಾತ್ರೆ ತೆಗೆದುಕೊಂಡು ಮದಕ್ಕೆ ರವೆ, ಖಾರದ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಮಸಾಲೆ ಹಚ್ಚಿ ನೆನೆಸಿಟ್ಟ ಆಲೂಗಡ್ಡೆ ಪೀಸ್ ಗಳನ್ನು ಒಂದೊಂದಾಗಿ ತೆಗೆದುಕೊಂಡು ಮಿಶ್ರಣದಲ್ಲಿ ಹಾಕಿ. ರವೆ ಕೋಟ್ ಆಲೂ ಪೀಸ್ ಗಳಿಗೆ ಸಂಪೂರ್ಣವಾಗಿ ಅಂಟಿಕೊಳ್ಳುವಂತೆ ಮಾಡಿ.
- ನಂತರ ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆ ಪೀಸ್ ಗಳನ್ನು ಅದರಲ್ಲಿಟ್ಟು ಎರಡೂ ಬದಿಯಲ್ಲೂ ಚಿನ್ನದ ಬಣ್ಣ ಬರುವವರೆದೆ ಫ್ರೈ ಮಾಡಿದರೆ ರುಚಿಕರವಾದ ಆಲೂ ರವಾ ಫ್ರೈ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.