- ಬೋಂಡಾ ಹಿಟ್ಟು: 500 ಗ್ರಾಂ
- ಅಕ್ಕಿ ಹಿಟ್ಟು: 50 ಗ್ರಾಂ
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಸ್ವಲ್ಪ
- ಅಡುಗೆ ಸೋಡಾ: 1/2 ಚಮಚ
- ಕತ್ತರಿಸಿದ ಈರುಳ್ಳಿ: 1 ಬಟ್ಟಲು
- ಕೊತ್ತಂಬರಿ ಸೊಪ್ಪು: ಕತ್ತರಿಸಿದ್ದು ಸ್ವಲ್ಪ
- ಹಸಿ ಮೆಣಸಿನಕಾಯಿ: ರುಚಿಗೆ ತಕ್ಕಷ್ಟು
- ಎಣ್ಣೆ- ಕರಿಯಲು
- ಬೋಂಡದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಗೂ ಅಡುಗೆ ಸೋಡಾ, ಅರಿಶಿಣದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ.
- ಸ್ವಲ್ಪ ನೀರು ಸೇರಿಸಿ ಒಂದು ನಿಮಿಷ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ.
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಬಿಸಿಯಾದ ಬಳಿಕ ಹಿಟ್ಟನ್ನು ಉಂಡೆಗಳ ರೀತಿಯಲ್ಲಿ ಮಾಡಿ ಎಣ್ಣೆಗೆ ಬಿಡಿ. ನಂತರ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಈರುಳ್ಳಿ ಬೋಂಡಾ ಸವಿಯಲು ಸಿದ್ಧ.