- ಆಲೂಗಡ್ಡೆ- 5-6
- ಉಪ್ಪು-ರುಚಿಗೆ ತಕ್ಕಷ್ಟು
- ಮೊದಲಿಗೆ 5-6 ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಸಿಪ್ಪೆ ತೆಗೆದು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಸ್ಲೈಸರ್ ನಿಂದ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.
- ಬಳಿಕ ಎರಡು ಬಾರಿ ನೀರು ಬದಲಿಸಿ ಸ್ಟಾರ್ಚ್ ಇಲ್ಲದಂತೆ ಚೆನ್ನಾಗಿ ತೊಳೆದುಕೊಳ್ಳಿ.
- ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಗೂ ಉಪ್ಪು ಹಾಕಿಡಿ. ನೀರು ಕಾದ ಬಳಿಕ ಕತ್ತರಿಸಿಕೊಂಡ ಆಲೂಗಡ್ಡೆ ಚೂರುಗಳನ್ನು ಹಾಕಿ 2-3 ನಿಮಿಷ ಬೇಯಿಸಿಕೊಳ್ಳಿ. ತುಂಬಾ ಮೆತ್ತಗೆ ಆಗಬಾರದು. ನಂತರ ಬಿಸಿಲಿನಲ್ಲಿ 2-3 ದಿನ ಒಣಗಿಸಿಟ್ಟುಕೊಳ್ಳಿ. ಅಗತ್ಯವಿದ್ದಾಗ ಕಾದ ಎಣ್ಣೆಗೆ ಹಾಕಿ ಸವಿಯಿರಿ.