ಸೋಯಾಬಿನ್ ಚಂಕ್ಸ್ ಗ್ರೇವಿ
ರುಚಿಕರವಾದ ಸೋಯಾಬಿನ್ ಚಂಕ್ಸ್ ಗ್ರೇವಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಸೋಯಾಬಿನ್ ಚಂಕ್ಸ್- 1 ಬಟ್ಟಲು
- ಈರುಳ್ಳಿ-2
- ಶುಂಠಿ, ಬೆಳ್ಳುಳ್ಳಿ ಪೇಸ್ಟ್-1 ಚಮಚ
- ಅಚ್ಚ ಖಾರದ ಪುಡಿ- 1 ಚಮಚ
- ಅರಿಶಿಣ-1/2 ಚಮಚ
- ದನಿಯಾ ಪುಡಿ-1 ಚಮಚ
- ಗರಂ ಮಸಾಲಾ-1/2 ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ತುರಿದ ತೆಂಗಿನ ಕಾಯಿ- ಸ್ವಲ್ಪ
- ಏಲಕ್ಕಿ-2
- ಚಕ್ಕೆ.ಲವಂಗ- 2
- ಕಸೂರಿ ಮೇತಿ-ಸ್ವಲ್ಪ
- ಏಲಕ್ಕಿ-2
- ಜೀರಿಗೆ-1/2 ಚಮಚ
- ಟೊಮೆಟೋ-2
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಸ್ವಲ್ಪ
- ಗಸೆಗಸೆ- 1 ಚಮಚ
- ಗೋಡಂಬಿ-5-6
ಮಾಡುವ ವಿಧಾನ...
- ಮಿಕ್ಸಿ ಜಾರಿನಲ್ಲಿ ಗೋಡಂಬಿ, ಟೊಮೆಟೋ, ಗಸ ಗಸೆ ಸ್ವಲ್ಪ ನೀರನ್ನ ಹಾಕಿ ಗ್ರೈಂಡ್ ಮಾಡಿಕೊಳ್ಳಿ.
- ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನ ಹಾಕಿ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಕಸೂರಿ ಮೇತಿ ಹಾಕಿ ಹುರಿದುಕೊಳ್ಳಿ.
- ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ.
- ನಂತರ ಗರಂ ಮಸಾಲಾ, ಖಾರದ ಪುಡಿ, ದನಿಯಾ ಪುಡಿಯನ್ನ ಹಾಕಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
- ಬಳಿಕ ಬೆಚ್ಚನೆಯ ನೀರಿನಲ್ಲಿ ಕೆಲವೇ ನಿಮಿಷಗಳ ಕಾಲ ಬೇಯಿಸಿಟ್ಟ ಸೋಯಾ ಚಂಕ್ಸ್ಗಳನ್ನ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಐದರಿಂದ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ರುಚಿಕರವಾದ ಸೋಯಾಬಿನ್ ಚಂಕ್ಸ್ ಗ್ರೇವಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.