ಮಿಲ್ಕ್ ಕೇಕ್ 
ಅಡುಗೆ

ಮಿಲ್ಕ್ ಕೇಕ್

ರುಚಿಕರವಾದ ಮಿಲ್ಕ್ ಕೇಕ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಹಾಲು- ಮೂರು ಲೀಟರ್
  • ನಿಂಬೆ ಹಣ್ಣಿನ ರಸ- 2 ಚಮಚ
  • ಏಲಕ್ಕಿ ಪುಡಿ- 1 ಚಮಚ
  • ತುಪ್ಪ- 1-2 ಚಮಚ
  • ಸಕ್ಕರೆ- 250 ಗ್ರಾಂ
  • ಬಾದಾಮಿ- ಸ್ವಲ್ಪ
  • ಎಣ್ಣೆ-ಸ್ವಲ್ಪ

ಮಾಡುವ ವಿಧಾನ..

  • ಒಂದು ಪಾತ್ರೆಗೆ ಹಾಲನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ. ನಂತರ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕಿ. ಹಾಲು ಒಡೆಯಲು ಶುರುವಾಗುವವರೆಗೆ ಕೈ ಆಡಿಸುತ್ತಿರಿ.
  • ಬಳಿಕ ಏಲಕ್ಕಿ ಪುಡಿ, ತುಪ್ಪ, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಪಾತ್ರೆಯ ತಳಕ್ಕೆ ಹಿಡಿಯದಂತೆ ನೋಡಿಕೊಳ್ಳಿ. ನೀರಿನ ಅಂಶವು ಆವಿಯಾಗುವವರೆಗೆ ಪಾತ್ರೆ ಒಲೆಯ ಮೇಲಿರಲಿ.
  • ಹದ ಬಂದ ಮೇಲೆ ಒಂದು ಪ್ಲೇಟ್ ಗೆ ಎಣ್ಣೆ ಸವರಿ ಈ ಮಿಶ್ರಣವನ್ನು ಅದರ ಮೇಲೆ ಹಾಕಿ. ಅಲಂಕಾರಕ್ಕೆ ಅದರ ಮೇಲೆ ಬಾದಾಮಿ ಉದುರಿಸಿ. ರಾತ್ರಿ ಪೂರ್ತಿ ಇದನ್ನು ಮುಚ್ಚಿಡಿ. ಬೆಳಿಗ್ಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್