ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಬೇಯಿಸಿ ತಣ್ಣಗಾಗಿಸಿದ ಸ್ವೀಟ್ ಕಾರ್ನ್, ಕ್ಯಾಪ್ಸಿಕಮ್ ಹಾಗೂ ಈರುಳ್ಳಿ ಹಾಕಿ ಮಿಶ್ರಣ ಮಾಡಿ.
ಬಳಿಕ ತುರಿದ ಚೀಸ್, ಟೊಮೆಟೊ ಕೆಚಪ್, ಕಾಳು ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಸ್ಟಫಿಂಗ್ ಅನ್ನು ಪಕ್ಕಕ್ಕಿಡಿ.
ಈಗ ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು, ಅದರ ಒಂದು ಬದಿಯಲ್ಲಿ ಒಂದೊಂದು ಟೀಸ್ಪೂನ್‌ನಷ್ಟು ಪುದೀನಾ ಚಟ್ನಿಯನ್ನು ಚೆನ್ನಾಗಿ ಹರಡಿಕೊಳ್ಳಿ.
ಈಗ 3 ಬ್ರೆಡ್‌ಗಳನ್ನು ಪಕ್ಕಕ್ಕಿರಿಸಿ, ಉಳಿದ 3 ಬ್ರೆಡ್‌ಗಳ ಮೇಲೆ ಒಂದೊಂದೇ ಸ್ಲೈಸ್ ಚೀಸ್ ಅನ್ನು ಇರಿಸಿ.
ಈಗ ತಯಾರಿಸಿಟ್ಟಿರುವ ಸ್ಟಫಿಂಗ್ ಮಿಶ್ರಣವನ್ನು ಒಂದೆರಡು ಟೀಸ್ಪೂನ್‌ಗಳಷ್ಟು ಬ್ರೆಡ್ ಸ್ಲೈಸ್‌ಗಳ ಮೇಲೆ ಹರಡಿ.
ಅವುಗಳ ಮೇಲೆ ಉಳಿದ ಸ್ಲೈಸ್ ಚೀಸ್‌ಗಳನ್ನಿರಿಸಿ, ಪಕ್ಕಕ್ಕಿಟ್ಟಿದ್ದ ಬ್ರೆಡ್‌ಗಳನ್ನು ಅವುಗಳ ಮೇಲಿಸಿ.
ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಬೆಣ್ಣೆ ಹಾಕಿ, ಅವುಗಳ ಮೇಲೆ ಸ್ಯಾಂಡ್‌ವಿಚ್‌ಗಳನ್ನು ಇರಿಸಿ ಎರಡೂ ಬದಿ ರೋಸ್ಟ್ ಮಾಡಿಕೊಳ್ಳಿ.
ಸ್ಯಾಂಡ್‌ವಿಚ್‌ಗಳು ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅವುಗಳನ್ನು ತವಾದಿಂದ ತೆಗೆದು ಚಾಕುವಿನ ಸಹಾಯದಿಂದ ಅರ್ಧಕ್ಕೆ ಕತ್ತರಿಸಿ. ಇದೀಗ ರುಚಿಕರವಾದ ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಸವಿಯಲು ಸಿದ್ಧ.